Saturday, August 15, 2026

BDA Apartments

Home Front Page ಯಾವ ಜಿಲ್ಲೆಯೂ ಕೂಡ ಯಾರ ಅಪ್ಪನ ಆಸ್ತಿಯಲ್ಲ- ಮಾಜಿ ಸಿಎಂ ಹೆಚ್.ಡಿಕೆಗೆ ಸಿ.ಟಿ ರವಿ ಟಾಂಗ್.

ಯಾವ ಜಿಲ್ಲೆಯೂ ಕೂಡ ಯಾರ ಅಪ್ಪನ ಆಸ್ತಿಯಲ್ಲ- ಮಾಜಿ ಸಿಎಂ ಹೆಚ್.ಡಿಕೆಗೆ ಸಿ.ಟಿ ರವಿ ಟಾಂಗ್.

ಬೆಳಗಾವಿ,ಡಿಸೆಂಬರ್,28,2022(www.justkannada.in):  ಯಾವುದೇ ಜಿಲ್ಲೆಯನ್ನ ಯಾರಿಗೂ ಜಹಗೀರ್ ಕೊಟ್ಟಿಲ್ಲ. ಯಾವ ಜಿಲ್ಲೆಯೂ ಕೂಡ ಯಾರ ಅಪ್ಪನ ಆಸ್ತಿಯಲ್ಲ. ಯಾರ ವಂಶಪಾರಂಪರ್ಯ ಆಸ್ತಿಯೂ ಅಲ್ಲ. ಹೆಚ್.ಡಿ ಕುಮಾರಸ್ವಾಮಿಗೆ ರಾಜಕಾರಣ ಅರ್ಥ ಆಗುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಶಾಸಕ ಸಿ.ಟಿ ರವಿ, ಹಳೇ ಮೈಸೂರು ಭಾಗದಲ್ಲಿ ವಿಶೇಷ ವಾಗಿ ಫೋಕಸ್ ಮಾಡುತ್ತೇವೆ. ಶ್ರಮ  ಹಾಕಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ . ಹಳೇ ಮೈಸೂರು ಭಾಗ ಕಬ್ಬಿಣದ ಕಡಲೇ ಅಲ್ಲ ಎಂದರು.BL Santosh - selection -candidates - Rajya Sabha-minister-CT Ravi.

ನಾಳೆ ಮಂಡ್ಯಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ,  ಒಳ್ಳೆಯ ಆಟಗಾರ ಯಾವ ಪಿಚ್ ಆದರೂ ಸರಿ ಚೆನ್ನಾಗಿ ಆಟವಾಡುತ್ತಾನೆ. ಅಮಿತ್ ಶಾ ಅವರು ಒಳ್ಳೆಯ ಆಟಗಾರ.  ದೇಶದ ಯಾವುದೇ ಪಿಚ್ ಇರಲಿ ಚೆನ್ನಾಗಿ ಆಟ ಆಡುತ್ತಾರೆ ಎಂದರು.

Key words: mandya-tong –CT Ravi-former CM-HD kumaraswamy