ಮಂಡ್ಯ,ಜನವರಿ,30,2026 (www.justkannaa.in): ಮಂಡ್ಯ ಜಿಲ್ಲೆ ಅಭಿವೃದ್ದಿಗೆ ನಾವು 10 ಸಾವಿರ ಕೋಟಿ ರೂ. ತಂದಿದ್ದೇವೆ. ಜಿಲ್ಲೆಗೆ ಏನೂ ತರದವರು ಲೆಕ್ಕ ಕೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ಕನ್ನಡ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರವಿ ಗಣಿಗ, ಮಂಡ್ಯ ಜಿಲ್ಲೆಗೆ ಏನು ಕೊಟ್ಟಿದ್ದೇವೆ ಎಂಬ ಲೆಕ್ಕ ಕೊಡಲು ರೆಡಿ ಇದ್ದೇವೆ. ನಾವು ಕೂಡ ಲೆಕ್ಕ ಕೇಳುತ್ತೇವೆ ಲೆಕ್ಕ ಕೇಳಲು ನಮಗೂ ಹಕ್ಕಿದೆ. ಮಂಡ್ಯ ನಗರ ಚಿತ್ರಣ ಬದಲಾಯಿಸಲು 100 ಕೋಟಿ ಅನುದಾನ ಬೇಕು ಎಂದರು.
Key words: Rs 10,000 crore, development, Mandya district, Congress, MLA







