Friday, September 18, 2026

BDA Apartments

ಮಠ ಮಂದಿರಗಳ ಮೇಲೆ ವಕ್ಫ್ ಬೋರ್ಡ್ ಕಣ್ಣು: ವಕ್ಫ್ ಜಿಹಾದಿ ನಡೆದಿದೆ- ಕೇಂದ್ರ ಸಚ...
Home Front Page ಮಠ ಮಂದಿರಗಳ ಮೇಲೆ ವಕ್ಫ್ ಬೋರ್ಡ್ ಕಣ್ಣು: ವಕ್ಫ್ ಜಿಹಾದಿ ನಡೆದಿದೆ- ಕೇಂದ್ರ ಸಚಿವ ಪ್ರಹ್ಲಾದ್...

ಮಠ ಮಂದಿರಗಳ ಮೇಲೆ ವಕ್ಫ್ ಬೋರ್ಡ್ ಕಣ್ಣು: ವಕ್ಫ್ ಜಿಹಾದಿ ನಡೆದಿದೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ,ನವೆಂಬರ್,8,2024 (www.justkannada.in): ರಾಜ್ಯದಲ್ಲಿ ವಕ್ಫ್ ಹೆಸರಿನಲ್ಲಿ ಹೊಸ ಜಿಹಾದಿ ನಡೆದಿದೆ. ಮಠ ಮಂದಿರಗಳ ಮೇಲೆ ವಕ್ಫ್ ಬೋರ್ಡ್ ಕಣ್ಣು ಬಿದ್ದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಗಿನೆಲೆ ಮಠವನ್ನು ವಕ್ಫ್  ಮಾಡೋಕೆ ಹೊರಡಿಸಿದ್ದಾರೆ ಇದನ್ನು ನಮ್ಮ ಶಾಸಕ ಭೈರತಿ ಬಸವರಾಜ್  ಹೇಳಿದರು.  ಸಿಎಂ ಸಿದ್ದರಾಮಯ್ಯ ಅವರೇ  ಏನು ಮಾಡಲು ಹೊರಟಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ಮುಡಾ ಕೇಸ್ ನಲ್ಲಿ ನನ್ನನ್ನು ಸಿಲುಕಿಸಿದ್ರು ಅಂತಾರೆ.  ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟರು. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟರು. ಆಗ ನ್ಯಾಯಾಲಯಕ್ಕೆ ಹೋಗಿದ್ದರು. ಸಿಎಂ ಸಿದ‍್ಧರಾಮಯ್ಯ ನನ್ನ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ ಎಂದು ಹರಿಹಾಯ್ದರು.

ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕುರಿತು ಮಾತನಾಡಿದ ಪ್ರಹ್ಲಾದ್ ಜೋಶಿ, ರಾಜ್ಯದ ಮೂರು ಕಡೆ ಎನ್ ಡಿಎ ಅಭ್ಯರ್ಥಿ ಗೆಲ್ತಾರೆ. ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ಮಾಡುತ್ತಿದೆ ಎಂದರು.

Key words: Mandira,  Waqf Jihadi, Union Minister, Prahlad Joshi