Saturday, August 22, 2026

BDA Apartments

Home Crime BEO ಕಚೇರಿಯಲ್ಲೇ ನೇಣುಬಿಗಿದುಕೊಂಡು ಮ್ಯಾನೇಜರ್ ಆತ್ಮಹತ್ಯೆ.

BEO ಕಚೇರಿಯಲ್ಲೇ ನೇಣುಬಿಗಿದುಕೊಂಡು ಮ್ಯಾನೇಜರ್ ಆತ್ಮಹತ್ಯೆ.

ಚಿಕ್ಕಮಗಳೂರು, ಜನವರಿ,1,2024(www.justkannada.in):  ಬಿಇಒ ಕಚೇರಿಯಲ್ಲೇ ಮ್ಯಾನೇಜರ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದಿದೆ.

ಮೂಡಿಗೆರೆ ಬಿಇಒ ಕಚೇರಿಯಲ್ಲಿ ಮ್ಯಾನೇಜರ್ ನಿಂಗನಾಯಕ್(57) ಡೆತ್ ನೋಟ್  ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿಂಗನಾಯಕ್ ಕಡೂರು ಮೂಲದವರಾಗಿದ್ದು, ಕಳೆದ ಎರಡು ವರ್ಷಗಳಿಂದ ಮೂಡಿಗೆರೆ ಬಿಇಓ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ನಡುವೆ ವಾರದ ಹಿಂದಷ್ಟೇ  ಬಿಇಓ ಕಚೇರಿಯ ಮೇಲೆ ಲೋಕಾಯುಕ್ತ ದಾಳಿ ನಡೆಸಿತ್ತು. ಆಗ ಹತ್ತು ಸಾವಿರ ಹಣ ಪಡೆಯುತ್ತಿದ್ದ ಬಿಇಓ  ಹೇಮಂತ್ ರಾಜ್ ಸಿಕ್ಕಿಬಿದ್ದಿದ್ದರು. ಲೋಕಾಯುಕ್ತ ದಾಳಿಯಿಂದ ನಿಂಗನಾಯಕ್ ಆತಂಕಗೊಂಡಿದ್ದರು.  ಇದೀಗ ಮೂಡಿಗೆರೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Manager -committed -suicide – hanging- BEO- office.