ಬಿಜೆಪಿ ಆಡಳಿತವನ್ನು ತಾಲಿಬಾನ್‌ಗೆ ಹೋಲಿಸಿದ ಮಮತಾ ಬ್ಯಾನರ್ಜಿ

ಬೆಂಗಳೂರು, ಸೆಪ್ಟೆಂಬರ್ 26, 2021 (www.justkannada.in): ಬಿಜೆಪಿಯನ್ನು ಅಫ್ಗಾನಿಸ್ತಾನವನ್ನು ಆಕ್ರಮಿಸಿಕೊಂಡು ಆಡಳಿತ ನಡೆಸುತ್ತಿರುವ ತಾಲಿಬಾನ್‌ಗೆ ಹೋಲಿಸಿದ್ದಾರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ನಮ್ಮ ಸ್ವಾತಂತ್ರ್ಯವನ್ನು ನಾವು ಕಾಪಾಡಿಕೊಳ್ಳಬೇಕಿದೆ. ‘ತಾಲಿಬಾನಿ ಬಿಜೆಪಿ’ ಭಾರತವನ್ನು ಆಳಲು ಸಾಧ್ಯವಿಲ್ಲ. ಬಿಜೆಪಿಯನ್ನು ಸೋಲಿಸಲು ತೃಣಮೂಲ ಕಾಂಗ್ರೆಸ್‌ ಒಂದೇ ಸಾಕು ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಬಿಜೆಪಿಯ ಸರ್ವಾಧಿಕಾರಿ ಧೋರಣೆಯನ್ನು ತಾಲಿಬಾನಿ ಉಗ್ರರ ಆಡಳಿತಕ್ಕೆ ಹೋಲಿಸಿರುವ ದೀದಿ. ರಾಜ್ಯ ಸರಕಾರಗಳ ಸ್ವಾತಂತ್ರ್ಯಗಳನ್ನು ಹತ್ತಿಕ್ಕುವ ಕೇಂದ್ರ ಸರ್ಕಾರದ ಕೆಟ್ಟ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ದೇಶದಲ್ಲಿ ಬಿಜೆಪಿಯ ದುರಾಡಳಿತ, ಸರ್ವಾಧಿಕಾರವನ್ನು ಟಿಎಂಸಿ ಒಂದೇ ಅಂತ್ಯಗೊಳಿಸಲಿದೆ. ಭವಾನಿಪುರದ ಉಪಚುನಾವಣೆಯಲ್ಲಿ ತಮ್ಮ ಪ್ರಚಂಡ ಜಯಭೇರಿಯಿಂದ ಇದು ಶುರುವಾಗಲಿದೆ ಎಂದಿದ್ದಾರೆ.

key words: Mamata Banerjee compares the BJP administration to the Taliban