ಮಲ್ಲಿಕಾರ್ಜುನ ಖರ್ಗೆ ಒಂದು ಕ್ಷೇತ್ರದಲ್ಲಿ ಬಂದು ಸ್ಪರ್ಧಿಸಿ ಗೆದ್ದು ತೋರಿಸಲಿ- ನಳೀನ್ ಕುಮಾರ್ ಕಟೀಲ್ ಸವಾಲು.

ಮಂಗಳೂರು,ಏಪ್ರಿಲ್,13,2023(www.justkannada.in): ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕ ಸಂತೋಷ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ  ಕಾಂಗ್ರೆಸ್  ನೀಡಿದ ಪಂಥಾಹ್ವಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಡಿಕೆ ಶಿವಕುಮಾರ್ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕೂಡ ಸಿಎಂ ಆಗಬೇಕಾದವರು ಅಲ್ವಾ..? ಮಲ್ಲಿಕಾರ್ಜುನ ಖರ್ಗೆ ಒಂದು ಕ್ಷೇತ್ರಕ್ಕೆ  ಬಂದು ಸ್ಪರ್ಧೆ ಮಾಡಿ ಗೆದ್ಧು ತೋರಿಸಲಿ. ಡಿ.ಕೆ ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆಗೆ ಕ್ಷೇತ್ರ ಬಿಟ್ಟುಕೊಡಲಿ ನೋಡೋಣ ಎಂದು ಸವಾಲು ಹಾಕಿದರು.

ಬಿಜೆಪಿಗೆ ರಾಜೀನಾಮೆ ನೀಡಿರುವ ಶಾಸಕ ಎಂ.ಪಿ ಕುಮಾರಸ್ವಾಮಿ ಜತೆ ಮಾತನಾಡುತ್ತೇನೆ. ಎಲ್ಲವೂ ಸರಿ ಹೋಗುತ್ತೆ. ಉತ್ತಮ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಟಿಕೆಟ್ ಗಾಗಿ ಜಗದೀಶ್ ಶೆಟ್ಟರ್ ದೆಹಲಿಗೆ ಹೋಗಿಲ್ಲ. ಜಗದೀಶ್ ಶೆಟ್ಟರ್ ಜತೆ ನಮ್ಮ ವರಿಷ್ಠರು ಮಾತನಾಡಿದ್ದಾರೆ. ಇನ್ನೆರಡು ದಿನದಲ್ಲಿ ಬಾಕಿ ಕ್ಷೇತ್ರಗಳಿಗೂ ಟಿಕಟ್ ಘೋಷಣೆಯಾಗುತ್ತೆ. ಉಳಿದ ಕ್ಷೇತ್ರಗಳಲ್ಳೂ ಅಚ್ಚರಿಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ ಎಂದು ತಿಳಿಸಿದರು.

Key words: Mallikarjuna Kharge –compete- constituency -win – Naleen Kumar Kateel -challenge.