ಬೆಂಗಳೂರು,ಆಗಸ್ಟ್,8,2025 (www.justkannada.in): ನನ್ನ ಜೀವನದಲ್ಲಿ ಸೋಲು ಕಂಡಿದ್ದು ಒಂದೇ ಒಂದು ಚುನಾವಣೆಯಲ್ಲಿ. ಆ ಚುನಾವಣೆಯಲ್ಲಿ ಬೋಗಸ್ ವೋಟ್ ಹಾಕಿಸಿ ನನ್ನನ್ನ ಸೋಲಿಸಿದರು. ಕೇಂದ್ರದಲ್ಲಿರುವುದು ಕಳ್ಳತನದ ಬಿಜೆಪಿ ಸರ್ಕಾರ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಇಂದು ಮತಗಳ್ಳತನದ ವಿರುದ್ದ ಫ್ರೀಡಂಪಾರ್ಕ್ ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, 2019ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ನಾನು ಸೋತೆ. ಟಾರ್ಗೆಟ್ ಮಾಡಿ ನನ್ನನ್ನ 2019ರ ಚುನಾವಣೆಯಲ್ಲಿ ಸೋಲಿಸಿದರು. ನನ್ನ ಜೀವನದಲ್ಲಿ ಸೋಲು ಕಂಡಿದ್ದು ಒಂದೇ ಒಂದು ಚುನಾವಣೆಯಲ್ಲಿ 5 ಮತ ಕ್ಷೇತ್ರಗಳಲ್ಲಿ ಬೋಗಸ್ ಮತ ಹಾಕಿಸಿ ನನ್ನನ್ನ ಸೋಲಿಸಿದರು. ಕೇಂದ್ರ ಬಿಜೆಪಿ ಸರ್ಕಾರ ಕಳ್ಳತನದ ಸರ್ಕಾರ ಇದಕ್ಕೆ ಯಾವುದೇ ನೈತಿಕತ ಇಲ್ಲ. ರಾಹುಲ್ ಗಾಂಧಿ ಮಹದೇವಪುರದಲ್ಲಿ 6.60 ಲಕ್ಷ ಮತದಾರರ ಮಾಹಿತಿ ಕಲೆ ಹಾಕಿದ್ದಾರೆ. ರಾಜಸ್ತಾನ ಮಧ್ಯಪ್ರದೇಶದಲ್ಲಿ ಬೋಗಸ್ ವೋಟ್ ಹಾಕಿಸಿದ್ದಾರೆ. 2019ರಲ್ಲಿ ಈ ಮಾತನ್ನ ಹೇಳಿದ್ದೆ ಎಂದರು.
ಸೋಮವಾರ ಕೇಂದ್ರ ಚುನಾವಣಾ ಆಯೋಗಕ್ಕೆ ಎಲ್ಲಾ ವಿಪಕ್ಷ ಸಂಸದರು ದೂರು ನೀಡುತ್ತೇವೆ ಚುನಾವಣಾ ಅಕ್ರಮ ಖಂಡಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಖರ್ಗೆ ಹೇಳಿದರು
ಮೋದಿ ನಮ್ಮ ಕಾರ್ಯಕರ್ತರಿಗೆ ಹೆದರಿಸುತ್ತಾರೆ. ಇಡಿ, ಸಿಬಿಐ ಬಳಿಸಿ ಮೆಜಾರಿಟಿ ಮಾಡಿಕೊಂಡಿದ್ದಾರೆ. ಆನೇಕ ರಾಜ್ಯಗಳಲ್ಲಿ ಅವರಿಗೆ ಮೆಜಾರಿಟಿ ಇಲ್ಲ ದುಡ್ಡುಕೊಟ್ಟು ಸರ್ಕಾರಗಳನ್ನ ರಚಿಸಿದ್ದಾರೆ. ಕೇಂದ್ರದಲ್ಲಿ ಇರುವುದು ಮತಗಳ್ಳತನದ ಸರ್ಕಾರ 2024ರಲ್ಲಿ ಮೋದಿ ಅಂಡ್ ಕಂಪನಿ ನಿಜವಾಗಿ ಗೆದ್ದಿಲ್ಲ ಕಳ್ಳತನದಿಂದ ಗೆದ್ದ ಬಿಜೆಪಿ ಹೆಚ್ಚು ದಿನ ಉಳಿಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಗುಡುಗಿದರು.
Key words: BJP government, theft , Vote, Mallikarjuna Kharge, Protest