Saturday, September 19, 2026

BDA Apartments

Home Front Page ಮಲ್ಲಿಕಾರ್ಜುನ ಖರ್ಗೆ ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಬೇಕು- ಸಿ.ಟಿ ರವಿ ಆಗ್ರಹ

ಮಲ್ಲಿಕಾರ್ಜುನ ಖರ್ಗೆ ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಬೇಕು- ಸಿ.ಟಿ ರವಿ ಆಗ್ರಹ

ಮಲ್ಲಿಕಾರ್ಜುನ ಖರ್ಗೆ ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಬೇಕು puliyogare,ayyangar WhatsApp 11 1...

ಚಿಕ್ಕಮಗಳೂರು,ನವೆಂಬರ್,19,2024 (www.justkannada.in): ಆರ್ ಎಸ್ ಎಸ್ ಮತ್ತು ಬಿಜೆಪಿಯನ್ನು ವಿಷದ ಹಾವಿಗೆ ಹೋಲಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ, ಮಲ್ಲಿಕಾರ್ಜುನ ಖರ್ಗೆ ಹುಚ್ಚು ನಾಯಿ ಕಡಿದವರಂತೆ ಮಾತನಾಡುತ್ತಾರೆ.  ಖರ್ಗೆ ಗೌರವಕ್ಕೆ ತಕ್ಕದಾದ ಮಾತು ಇದಲ್ಲ.  ಖರ್ಗೆ ಹೇಳಿದ್ದಾರೋ ಅಥವಾ ಯಾರೋ ಹೇಳಿಸಿದ್ದಾರೋ ಗೊತ್ತಿಲ್ಲ. ರಾಹುಲ್ ಗಾಂಧಿ ಸೋನಿಯಾ ಗಾಂಧಿ ಮಾತನಾಡಿಸಿದ್ದಾರೆ ಅನ್ನಿಸುತ್ತಿದೆ  ಇದು ಸಂವಿಧಾನದ ಮೇಲೆ ನಂಬಿಕೆ ಇಟ್ಟವರ ಮಾತಲ್ಲ ಎಂದು ಕಿಡಿಕಾರಿದರು.ಸಿ.ಟಿ ರವಿ ಆಗ್ರಹ mallikarjun kharge

ಹೊಡಿ ಬಡಿ ಕೊಲ್ಲುವುದು ತಾಲಿಬಾನಿಗಳ ಮಾತು. ಮಲ್ಲಿಕಾರ್ಜುನ ಖರ್ಗೆ ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಬೇಕು  ಎಂದು ಸಿಟಿ ರವಿ ಆಗ್ರಹಿಸಿದರು.

Key words: Mallikarjun Kharge, express, regret, words, CT Ravi