ಕಲಬುರಗಿ,ಜನವರಿ,12,2026 (www.justkannada.in): ಮಧು ಬಂಗಾರಪ್ಪನವರೇ ಮೊದಲು ಕಲ್ಯಾಣ ಕರ್ನಾಟಕ ಭಾಗಕ್ಕೆ ಶಿಕ್ಷಕರನ್ನ ಕೊಡಿ ಎಂದು ಎಐಸಿಸಿ ಅಧ್ಯಕ್ಷ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಲಬುರಗಿಯ ಯಡ್ರಾಮಿಯಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ವೇಳ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಕ್ಕಳು ಮರದ ಕೆಳಗೆ ಕೂತರೂ ಪರವಾಗಿಲ್ಲ ಮೊದಲು ಶಿಕ್ಷಕರ ನೇಮಕಾತಿ ಮಾಡಿ ಶಿಕ್ಷಕರನ್ನ ಕೊಡಿ. ಶಿಕ್ಷಕರನ್ನು ಕೊಟ್ಟರೆ ಮಾತ್ರ ಈ ಭಾಗ ಶಿಕ್ಷಣದಲ್ಲಿ ಮುಂದುವರೆಯುತ್ತದೆ ಎಂದು ಹೇಳಿದರು.
ಸರ್ಕಾರಿ ಶಾಲೆಯಲ್ಲಿ ಓದಿ ಸಿದ್ದರಾಮಯ್ಯ 2 ಬಾರಿ ಸಿಎಂ ಆದರು. ಸಿದ್ದರಾಮಯ್ಯ ಕಾನ್ವೆಂಟ್ ನಲ್ಲಿ ಓದಿಲ್ಲ. ಸರ್ಕಾರಿ ಶಾಲೆಯಲ್ಲಿ ಓದಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಡಿಕೆ ಶಿವಕುಮಾರ್ ಸ್ವಲ್ಪ ಕಾನ್ವೆಂಟ್ ಲಿಂಕ್ ಇದೆ. ಈ ಭಾಗದಲ್ಲಿ ಹುಟ್ಟಬೇಕಿತ್ತು ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ. ನೀವು ಇಲ್ಲಿ ಹುಟ್ಟುವುದು ಬೇಡ ನಾವು ಅಲ್ಲಿ ಹುಟ್ಟುವುದು ಬೇಡ. ನಿಮ್ಮ ಮೈಸೂರು ಬೆಂಗಳೂರಿನ ರೀತಿ ಅಭಿವೃದ್ದಿ ಮಾಡಬೇಕು. ಸಿಎಂ ಹಗೂ ಡಿಸಿಎಂ ಈ ಭಾಗದ ಬಗ್ಗೆ ಗಮನ ಕೊಡಿ ದೆಹಲಿಯಿಂದ ಬಂದು ನಾನು ಜನರಿಗೆ ಪ್ರಚೋದನೆ ಕೊಡುತ್ತಿಲ್ಲ. ಅದರ ಬದಲಾಗಿ ನಿಮ್ಮ ಭಾಗದಷ್ಟೆ ನಮ್ಮ ಭಾಗವನ್ನೂ ಅಭಿವೃದ್ದಿ ಮಾಡಿ ಎಂದು ಮನವಿ ಮಾಡಿದರು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅತಿಹೆಚ್ಚು ಶಿಕ್ಷಕರ ಕೊರತೆ ಕಾಡುತ್ತಿದ್ದು ಒಳಮೀಸಲಾತಿಯಿಂದಾಗಿ ಕಳೆದ ಒಂದುವರೆ ವರ್ಷದಿಂದ ನೇಮಕಾತಿಗಳಿಗೆ ತಡೆಬಿದ್ದಿದೆ. ಹೀಗಾಗಿ ಶಿಕ್ಷಕರ ನೇಮಕಾತಿಗೂ ಸಹ ಗ್ರಹಣ ಹಿಡಿದಿದೆ.
Key words: Madhu Bangarappa, provide, teachers, AICC President, Mallikarjun Kharge







