ಕದನ ವಿರಾಮ: ಸರ್ವಪಕ್ಷ ಸಭೆ ಕರೆಯಲು ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯ

ಬೆಂಗಳೂರು,ಮೇ,13,2025 (www.justkannada.in): ಭಾರತ- ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದ್ದು ಅಮೇರಿಕಾ ಮಧ್ಯಸ್ಥಿಕೆಯಿಂದ ಎಂಬ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿಕೆ ಕುರಿತು  ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ರಾಜ್ಯಸಭೆ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ಸರ್ವ ಪಕ್ಷ ಸಭೆ ಕರೆಯಬೇಕು.  ನನ್ನಿಂದ ಕದನ ವಿರಾಮ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದು  ಕೇಂದ್ರ ಈ ಬಗ್ಗೆ ಮಾಹಿತಿ ನೀಡಲಿ. ಸಂಸತ್ ಅಧಿವೇಶನ ಕರೆದು ಚರ್ಚಿಸಬೇಕು ಎಂಬುದು ನಮ್ಮ ಆಗ್ರಹ ಎಂದರು.

ಕದನ ವಿರಾಮ ಅತ್ಯಂತ ಸೂಕ್ಷ್ಮ ವಿಚಾರ ಮೋದಿ ಸರ್ವಪಕ್ಷ ಸಭೆ ಕರೆಯುತ್ತಾರೆ,  ಅಲ್ಲಿ ಮಾತನಾಡುತ್ತೇನೆ ಟ್ರಂಪ್ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಆ ರೀತಿ ಹೇಳಿದ್ದಾರೆ. ಆದ್ರೆ ಮೋದಿ ಇಲ್ಲ ಅಂತಿದ್ದಾರೆ. ಅವರಿಬ್ಬರ ನಡುವೆ ಏನು ಮಾತುಕತೆ ಆಗಿದೆ ಗೊತ್ತಿಲ್ಲ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದ್ರೆ ನಾನು ಹೇಳುತ್ತೇನೆ. ಇಂದು ನಮ್ಮ ಪಕ್ಷದ ಸಭೆ ಇದೆ ನಾನು ಹೋಗುತ್ತಿದ್ದೇನೆ ಎಂದು ಖರ್ಗೆ ತಿಳಿಸಿದರು.

Key words: Ceasefire, Mallikarjun Kharge, PM Modi, all-party meeting