Saturday, September 5, 2026

BDA Apartments

Home Front Page ಪ್ರಧಾನಿ ಮೋದಿಯಿಂದ ಸರ್ವಾಧಿಕಾರಿ ರೀತಿ ಕಾರ್ಯ ನಿರ್ವಹಣೆ – ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ಮೋದಿಯಿಂದ ಸರ್ವಾಧಿಕಾರಿ ರೀತಿ ಕಾರ್ಯ ನಿರ್ವಹಣೆ – ಮಲ್ಲಿಕಾರ್ಜುನ ಖರ್ಗೆ

ನವದೆಹಲಿ,ಜುಲೈ,22,2026 (www.justkannada.in): ನೀಟ್ ಅಕ್ರಮ ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಧರಣಿ ಕುಳಿತಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಪ್ರಿಯಾಂಕಾ ಗಾಂಧಿ ಅವರನ್ನ ವಶಕ್ಕೆ ಪಡೆದ ವಿಚಾರಕ್ಕೆ  ಸಂಬಂಧಿಸಿದಂತೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಂಸತ್ ಭವನದ ಬಳಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ,  ಇದು ಪ್ರಜಾಸತ್ತಾತ್ಮಕ ಸರ್ಕಾರವಲ್ಲ ಎಂದು ನಾನು ನಿನ್ನೆಯೇ ಹೇಳಿದ್ದೆ.  ಪ್ರಧಾನಿ  ಮೋದಿ ಸರ್ವಾಧಿಕಾರದ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸದರ ಬಗ್ಗೆ ಪ್ರಧಾನಿ ಮೋದಿ ಕೇಂದ್ರ ಸರ್ಕಾರಕ್ಕೆ ಗೌರವವಿಲ್ಲ ಶಾಂತಿಯುತ ಪ್ರತಿಭಟನೆ ನಡೆಸಿದವರಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇದು ಪ್ರಜಾಸತ್ತಾತ್ಮಕ ಸರ್ಕಾರವಲ್ಲ ಸರ್ವಾಧಿಕಾರ  ಬಿಜೆಪಿ  ಆರ್ ಎಸ್ ಎಸ್  ಕಾರ್ಯಕರ್ತರೂ ಬ್ಯಾಡ್ಜ್  ಧರಿಸದೇ ಪೊಲೀಸರ ಜೊತೆ ಶಾಮೀಲಾಗಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳನ್ನ ಹೆದರಿಸುವ ಕೆಲಸ ಮಾಡಿದ್ದಾರೆ.  ನಮ್ಮ ನಾಯಕರನ್ನ ತುಳಿಯಲು ಯತ್ನಿಸಿದರೇ ಲಕ್ಷಾಂತರ ಸಂಖ್ಯೆಯಲ್ಲಿ ಜನ ಎದ್ದೇಳುತ್ತಾರೆ ಎಂದರು.

Key words: PM, Modi , dictatorship, Mallikarjun Kharge