ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಇದ್ದಾರೆ, ಆ ಪ್ರಶ್ನೆಯೇ ಉದ್ಬವಿಸಲ್ಲ- ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಕಲಬುರುಗಿ,ಏಪ್ರಿಲ್,30,2026 (www.justkannada.in):  ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಇದ್ದಾರೆ ಆ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಸದ್ಯಕ್ಕೆ ಇಲ್ಲ. ಆ ಪ್ರಶ್ನೆಯೇ ಉದ್ಬವಿಸಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಇದ್ದಾರೆ ಹೀಗಾಗಿ ನಾಯಕತ್ವ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ವಿಚಾರ ಬಂದರೆ ನಾವೆಲ್ಲರೂ ಚರ್ಚೆ ಮಾಡುತ್ತೇವೆ. ಏನೇ ವಿಚಾರ ಬಂದರೆ ಸೋನಿಯಾ ರಾಹುಲ್ ಗಾಂಧಿ ನಾವು ಚರ್ಚೆ ಮಾಡುತ್ತೇವೆ.  ಆದಷ್ಟು ಬೇಗ ಗೊಂದಲ ಬಗೆಹರಿಸುತ್ತೇವೆ ಎಂದರು.

ಖರ್ಗೆ ಸಿಎಂ ಆದರೆ ಸಂತೋಷ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ,  ಅವರು ಹೇಳುತ್ತಾರೆ. ನೀವು ಹೇಳುತ್ತೀರಿ ಮೇಲುನವರು ಹೇಳುತ್ತಾರೆ . ಹಣೆಬರಹ ಅನ್ನೂದಕ್ಕಿಂತ ಪಕ್ಷಕ್ಕಾಗಿ ಈವರೆಗೆ ದುಡಿದಿದ್ದೇವೆ. ನಮ್ಮ ನಿರ್ಣಯಗಳನ್ನ ಹೆಚ್ಚಾಗಿ ಸೋನಿಯಾ ಗಾಂಧಿ ನಿರ್ಣಯಿಸುತ್ತಾರೆ ಎಂದರು.

Key words:  CM Change,  AICC, President, Mallikarjun Kharge, clarifies