ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಸಿಂಧೂ, ಸೈನಾ ಶುಭಾರಂಭ

ಕೌಲಾಲಂಪುರ, ಜನವರಿ 09, 2019 (www.justkannada.in): ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಹೆಮ್ಮೆಯ ಪಿ.ವಿ ಸಿಂಧೂ ಮತ್ತು ಸೈನಾ ನೆಹ್ವಾಲ್‌ ಶುಭಾರಂಭ ಮಾಡಿದ್ದಾರೆ.

ವಿಶ್ವದ ಮಾಜಿ ಅಗ್ರ ಶ್ರೇಯಾಂಕ ಆಟಗಾರ ಕಿಡಂಬಿ ಶ್ರೀಕಾಂತ್‌, ಬಿ. ಸಾಯಿ ಪ್ರಣೀತ್‌ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ. ಆಯಕ್ಸಿಯೆಟಾ ಅರೆನಾದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸಿಂಧೂ ರಷ್ಯಾದ ಎವ್ಗೆನಿಯಾ ಕೊಸೆಟ್ಸ್ಕಾಯ ವಿರುದ್ಧ 21-15, 21-13 ನೇರ ಗೇಮ್‌ಗಳಿಂದ ಜಯ ಗಳಿಸಿ 2ನೇ ಸುತ್ತು ಪ್ರವೇಶಿಧಿಸಿದರು.

ಮತ್ತೊಂದು ಪಂದ್ಯದಲ್ಲಿ ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ ಬೆಲ್ಜಿಯಮ್‌ನ ಲಿಯಾನ್‌ ಟ್ಯಾನ್‌ ವಿರುದಟಛಿ ಜಯದ ಗಳಿಸಿ ಎರಡನೇ ಸುತ್ತು ಪ್ರವೇಶಿಸಿದರು.