ಶೀಘ್ರ ಮನೆ ನಿರ್ಮಾಣ ಮಾಡ್ಕೊಳ್ಳಿ: ಮಳೆ ಸಂತ್ರಸ್ತರಿಗೆ ಸಿಎಂ ಮಾಹಿತಿ

ಬೆಂಗಳೂರು, ಡಿಸೆಂಬರ್ 12, 2019 (www.justkannada.in): ಪ್ರವಾಹ ಸಂತ್ರಸ್ತರಿಗೆ ಸಿಎಂ ಬಿ. ಎಸ್. ಯಡಿಯೂರಪ್ಪ ಮಹತ್ವದ ಮಾಹಿತಿ ನೀಡಿದ್ದಾರೆ.

ಅತಿವೃಷ್ಟಿಯಿಂದ ಹಾನಿಗೀಡಾದ ಎ ಮತ್ತು ಬಿ ವರ್ಗದ ಮನೆಗಳ ಪುನರ್ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು ನೀಡಲಾಗುತ್ತಿದ್ದು , ಫಲಾನುಭವಿಗಳು ಕೂಡಲೇ ಮನೆ ನಿರ್ಮಾಣ ಪ್ರಾರಂಭಿಸಬೇಕು ಎಂದು ಹೇಳಿದ್ದಾರೆ.

ಮನೆಗಳ ಪುನರ್ ನಿರ್ಮಾಣಕ್ಕೆ ಘೋಷಣೆ ಮಾಡಲಾಗಿರುವ 5 ಲಕ್ಷ ರೂ . ಪೈಕಿ 1 ಲಕ್ಷ ರೂ . ಮುಂಗಡವನ್ನು ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಈಗಾಗಲೇ ಜಮಾ ಮಾಡಲಾಗಿದೆ . ಉಳಿದ 4 ಲಕ್ಷ ರೂ . ಗಳನ್ನು ನಿರ್ಮಾಣ ಹಂತ ಆಧರಿಸಿ ಜಿಪಿಎಸ್ ಛಾಯಾಚಿತ್ರಗಳ ಆಧಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು .

ಫಲಾನುಭವಿಗಳು ಶೀಘ್ರವೇ ಮನೆ ನಿರ್ಮಾಣ ಕೆಲಸ ಆರಂಭಿಸಬೇಕು ಎಂದು ಸಿಎಂ ಬಿ . ಎಸ್ . ಯಡಿಯೂರಪ್ಪ ಮನವಿ ಮಾಡಿದ್ದಾರೆ .