ಬೆಳಗಾವಿಯಲ್ಲಿ ಹೊಸ ಮಹಾತ್ಮ ಗಾಂಧಿ  ವೃತ್ತ: ಮುಂದಿನ ವರ್ಷದಿಂದ ಭಜನೆ ಮತ್ತು ಗಾಂಧಿ ಸ್ಮರಣೆ ಕಾರ್ಯಕ್ರಮ…..

ಬೆಳಗಾವಿ,ಅ,2,2019(www.justkannada.in): ಬೆಳಗಾವಿ ಹಿಂಡಲಗಾ ರಸ್ತೆಯಲ್ಲಿ ಕ್ಯಾಂಪ್ ತಿರುವಿನಲ್ಲಿ ಈಗ ಮಹಾತ್ಮಾ ಗಾಂಧೀ ಪ್ರತಿಮೆಗೆ ಇಂದು ಹೊಸರೂಪ ಬಂದಿದ್ದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಸದಸ್ಯರು ಪ್ರತಿಮೆಗೆ ಹೂ ಹಾರ ಹಾಕಿ ಗಾಂಧಿ ಜಯಂತಿ  ಆಚರಿಸಿದರು.

ಮುಂದಿನ ವರ್ಷದಿಂದ ಈ ಹೊಸವೃತ್ತದಲ್ಲಿ ಮುಂಜಾನೆ ಗೌರವಾರ್ಪಣೆ ಕಾರ್ಯಕ್ರಮ ಹಾಗೂ ಸಂಜೆ 5 ರಿಂದ 6.30 ರವರೆಗೆ ಭಜನೆ ಮತ್ತು ಗಾಂಧೀಜಿ ಸ್ಮರಣೆಯ ಕಾರ್ಯಕ್ರಮ ಏರ್ಪಡಿಸಲು ಕ್ರಿಯಾ ಸಮಿತಿಯು ನಿರ್ಧರಿಸಿದ್ದು ಈ ಪ್ರದೇಶದ ಸುತ್ತಲಿರುವ ನಾಗರಿಕರನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಲಾಗಿದೆ.ವಿಶೇಷವಾಗಿ ಹಿರಿಯ ನಾಗರಿಕರ ಮುಂದಾಳತ್ವದಲ್ಲಿಯೇ ಈ ಕಾರ್ಯಕ್ರಮಗಳು ನಡೆಯಲಿವೆ.

ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ,ಸಾಗರ್ ಬೋರಗಲ್ಲ,ಕಿರಣ ಅನಗೋಳ,ರಜತ ಅಂಕಲೆ,ವಿರೇಂದ್ರ ಗೋಬರಿ ಹಾಗೂ ರಾಕೇಶ ಬಡಿಗೇರ ಇಂದು ಗಾಂಧೀಜಿ ಪ್ರತಿಮೆಗೆ ಹೂಹಾರ ಅರ್ಪಿಸಿ ಗೌರವ ಅರ್ಪಿಸಿದರು.

ಕ್ರಿಯಾ ಸಮಿತಿಯ ಮನವಿಯ ಮೇರೆಗೆ ಲೋಕೋಪಯೋಗಿ ಇಲಾಖೆಯ ಬೆಳಗಾವಿ ವೃತ್ತದ ಅಧೀಕ್ಷಕ ಅಭಿಯಂತರಾದ ಶ್ರೀ ಎಚ್.ಸುರೇಶ ಅವರು ಈ ವೃತ್ತದ ಸೌಂದರ್ಯಿಕರಣಗೊಳಿಸಿದ್ದಾರೆ.ಈ ಕಾರ್ಯದಲ್ಲಿ ಕಾರ್ಯಕಾರಿ ಅಭಿಯಂತ ಶ್ರೀ ಸಂಜೀವಕುಮಾರ  ಹುಲಿಕಾಯಿ,ಸಹಾಯಕ ಕಾರ್ಯಕಾರಿ  ಅಭಿಯಂತ ಶ್ರೀ ಮುನವಳ್ಳಿ  ಅವರು ಈ ವೃತ್ತಕ್ಕೆ  ಕಾಯಕಲ್ಪ  ಒದಗಿಸುವಲ್ಲಿ ಶ್ರಮವಹಿಸಿದ್ದಾರೆ.

Key words: Mahatma Gandhi – New Circle – Belgavi-Gandhi memorial -program – next year