ಮಹಾತ್ಮ ಗಾಂಧಿ 73ನೇ ಪುಣ್ಯತಿಥಿ ಹಿನ್ನೆಲೆ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್‌ , ಸ್ವೆಟರ್‌ಗಳನ್ನು ವಿತರಣೆ

ಮೈಸೂರು,ಜನವರಿ,30,2021(www.justkannada.in):  ಸರ್ವೋದಯ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್‌ಗಳು, ಸ್ವೆಟರ್‌ಗಳನ್ನು ಸುಜೀವ್ ಸಂಸ್ಥೆ ವತಿಯಿಂದ ವಿತರಿಸಲಾಯಿತು.jk

ಮಹಾತ್ಮ ಗಾಂಧಿಯವರು ಹುತಾತ್ಮರಾದ ದಿನದ ವಾರ್ಷಿಕ ಪುಣ್ಯತಿಥಿಯ ಅಂಗವಾಗಿ ಗಾಂಧಿಜೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು.

ಸರ್ಕಾರಿ ಶಾಲೆಗಳ  ಮತ್ತು ದೀನದಲಿತ ವಿದ್ಯಾರ್ಥಿಗಳು  ಸುಧಾರಣೆಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸುಜೀವ್ ಸಂಸ್ಥೆ ಅದರ ‘ಸ್ಮಾರ್ಟ್ ಕ್ಯಾಂಪೇನ್’ಅಡಿಯಲ್ಲಿ ವಿದ್ಯಾರಣ್ಯ ಪುರಂನಲ್ಲಿರುವ ವಾಣಿ ವಿದ್ಯಾ ಮಂದಿರ  ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಿದರು.Mahatma Gandhi - Martyr's Day-Sujeev Institute- distributes -educational kit -sweaters - students.

ಸಮಾಜದಲ್ಲಿ ಬಡ ಮತ್ತು ದುರ್ಬಲ ವರ್ಗದವರ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತಿರುವ ಸಂಸ್ಥೆ ಈವರೆಗೆ ನಗರದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆಂಬಲ ಮತ್ತು ಸೇವೆ ಸಲ್ಲಿಸಿದೆ.

ಇದೆ ಸಂಧರ್ಭದಲ್ಲಿ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅವರೊಂದಿಗೆ ಸುಜೀವ್ ಸಂಘಟನೆಯ ಅಧ್ಯಕ್ಷ ರಾಜಾರಾಮ್ ಮತ್ತು ಶೆಲ್ಲಿ ರಾಜರಾಂ, ಕಾರ್ಪೊರೇಟರ್ ಮಾವಿ ರಾಂಪ್ರಸಾದ್ ಮತ್ತು ಹೆಚ್ ಎಲ್ ವೆಂಕಟೇಶ್ , ಡಾ. ಚಂದ್ರಶೇಖರ್ ಅವರು ಶಾಲೆಯ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಿದರು. ಅರುಣೋದಯ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಸ್ವೆಟರ್‌ಗಳನ್ನು ಹಸ್ತಾಂತರಿಸಿದರು.

Key words: Mahatma Gandhi – Martyr’s Day-Sujeev Institute- distributes -educational kit -sweaters – students.