ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ ಕೇಸ್: ಕರವೇ ಕಾರ್ಯಕರ್ತರ ವಿರುದ್ಧ ಎಫ್ ಐಆರ್ ದಾಖಲು.

ಬೆಳಗಾವಿ,ಡಿಸೆಂಬರ್,7,2022(www.justkannada.in): ನಿನ್ನೆ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾತೆ ತೆಗೆದ ಮಹಾರಾಷ್ಟ್ರದ ವಿರುದ್ದ ಸಿಡಿದೆದ್ದ ಕರವೇ ಕಾರ್ಯಕರ್ತರು ನಿನ್ನೆ ಬೆಳಗಾವಿ ಚಲೋಗೆ  ಕರೆ ನೀಡಿದ್ದರು. ಬೆಳಗಾವಿ ಪ್ರವೇಶಕ್ಕೆ  ಅವಕಾಶ ಸಿಗದ  ಹಿನ್ನೆಲೆ ಹಿರೇಬಾಗೇವಾಡಿ ಬಳಿ ಪ್ರತಿಭಟನೆ ನಡೆಸಿ  ಮಹಾರಾಷ್ಟ್ರದ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಲಾರಿಗಳ ಮೇಲೆ ಕನ್ನಡ ಬಾವುಟ ಹಾರಿಸಿದ್ದರು.

ಈ ಸಂಬಂಧ ಇದೀಗ ಕರ್ನಾಟಕ ರಕ್ಷಣಾ ವೇದಿಕೆಯ 12 ಕಾರ್ಯಕರ್ತರ ವಿರುದ್ಧ ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

Key words: Maharashtra- lorry -stone – case-  FIR – against -Karave activists.