ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ‘ನಲಿ-ಕಲಿ’ ಕನ್ನಡ ಕಲಿಕಾ ಸಾಮಗ್ರಿ ವಿತರಣೆ.

ಸಾಂಗ್ಲಿ,ಆಗಸ್ಟ್,21,2025 (www.justkannada.in): ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ, ಆದರ್ಶ ಕನ್ನಡ ಬಳಗ, ಮಹಾರಾಷ್ಟ್ರ ಹಾಗೂ ಸೋಲಾಪುರ ಜಿಲ್ಲೆಯ ಕನ್ನಡಪರ ಸಂಘ-ಸಂಸ್ಥೆಗಳ “ಇವರ ಸಹಯೋಗದಲ್ಲಿ ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿ ಉತ್ಸವ -2025 ಹಾಗೂ ನಲಿ-ಕಲಿ ಸಾಮಗ್ರಿಗಳ ವಿತರಣಾ ಸಮಾರಂಭ ನಡೆಯಿತು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರವು ಮುಖ್ಯಮಂತ್ರಿಗಳ  ಆದೇಶದಂತೆ, ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಹಾಗೂ ಸೋಲಾಪುರ ಜಿಲ್ಲೆಯ 225 ಕನ್ನಡ ಶಾಲೆಗಳಿಗೆ ನಲಿಕಲಿ ಕಲಿಕಾ ಸಾಮಗ್ರಿ ವಿತರಿಸಿತು. ಪ್ರಿಯದರ್ಶಿನಿ ಮಂಗಲ ಕಾರ್ಯಾಲಯ ಅಕ್ಕಲಕೋಟೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ವಿವಿಧ ಕಲಾತಂಡಗಳೊಂದಿಗೆ ಭುವನೇಶ್ವರಿ ದೇವಿ ಮೆರವಣಿಗೆ ಹಾಗೂ ಕನ್ನಡ ಕಣ್ಮಣಿ ಪ್ರಶಸ್ತಿ ಪುರಸ್ಕೃತರುರಾದ ಹಲವಾರು ಮಹನೀಯರಿಗೆ ಸನ್ಮಾನ ಮಾಡಲಾಯಿತು.  ಬಳಿಕ ಪ್ರಪ್ರಥಮ ಬಾರಿಗೆ ಮಹಾರಾಷ್ಟ್ರದ ಗುಡ್ಡಾಪುರ, ಸೊಲ್ಲಾಪುರ ಹಾಗೂ ಅಕ್ಕಲಕೋಟೆ ಜಿಲ್ಲೆಯಲ್ಲಿ ಕನ್ನಡ ಶಾಲಾ ಮಕ್ಕಳಿಗೆ ಅನುಕೂಲವಾಗುವ ಸಲುವಾಗಿ ನಲಿ-ಕಲಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಸಾಹಿತಿಗಳಾದ  ಡಿ. ಎಂ. ನದಾಪ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಕನ್ನಡ ಪರ ಹೋರಾಟಗಾರ ಎಸ್. ಕೆ. ಬಿರಾಜದಾರ  ಆದರ್ಶ ಕನ್ನಡ ಬಳಗದ ಸದಸ್ಯ ರಾಜಶೇಖರ ಉಮ್ರಾಣಿಕರ್,  ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ,  ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉದ್ಘಾಟನಾ ಸಮಾರಂಭ ಸಮಯದಲ್ಲಿ ವೇದಿಕೆಯಲ್ಲಿ ಮ.ನಿ.ಪ್ರ. ಅಕ್ಕಲಕೋಟೆಯ ವಿರಕ್ತಮಠದ ಬಸವಲಿಂಗ ಮಹಾಸ್ವಾಮಿಜಿ, , ಅಕ್ಕಲಕೋಟೆ ಶಾಸಕ ಸಚಿನ್ ಕಲ್ಯಾಣಶೆಟ್ಟಿ , ಮಹಾರಾಷ್ಟ್ರ ಕಸಾಪ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ, ಮಿಲನದಾದಾ ಕಲ್ಯಾಣ ಶೆಟ್ಟಿ, ಆನಂದ ತಾನವಡೆ, ಮಹೇಶ ಇಂಗಳೆ, ಅಮೋಲರಾಜೆ ಭೋಸಲೆ,  ಮಲ್ಲಮ್ಮಾ ಪಸಾರೆ ಉಪಸ್ಥಿತರಿದ್ದರು.

Key words: Nali-Kali Kannada, Learning, Maternity,  Maharashtra, Kannada Schools.