ಮಹದಾಯಿ ಯೋಜನೆ ಜಾರಿ ಮಾಡೇ ಮಾಡುತ್ತೇವೆ- ಸಚಿವ ಗೋವಿಂದ ಕಾರಜೋಳ.

ಬೆಂಗಳೂರು,ಮಾರ್ಚ್,29,2022(www.justkannada.in): ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆಯನ್ನ ನಮ್ಮ ಸರ್ಕಾರ ಜಾರಿ ಮಾಡೇ ಮಾಡುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಮಹದಾಯಿ ಕಳಸಾ ಬಂಡೂರಿ ನಾಲಾ ಯೋಜನೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮಹದಾಯಿ ಯೋಜನೆ ಬಗ್ಗೆ ಕಾಂಗ್ರೆಸ್ ನವರಿಗಿಂತ ಹೆಚ್ಚು ನಮಗೆ ಬದ್ಧತೆ ಇದೆ. ಯೋಜನೆ ಜಾರಿಗೆ 1 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ.  ದೆಹಲಿಗೆ ಹೋಗಿ ಪರಿಸರ ಇಲಾಖೆ ಅನುಮತಿ ಪಡೆಯುತ್ತೇವೆ. ಶೀಘ್ರವೇ ಯೋಜನೆ ಜಾರಿ ಮಾಡುತ್ತೇವೆ ಎಂದರು.

Key words: mahadayi-project – implement-Minister -Govinda Karajola.