ಮಹದಾಯಿ ನದಿ ನೀರು ಹಂಚಿಕೆ ವಿವಾದ: ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಪತ್ರದಲ್ಲಿ ಯಾವುದೇ ಹುರುಳಿಲ್ಲ- ಹೆಚ್.ಕೆ ಪಾಟೀಲ್ ಕಿಡಿ…

ಹುಬ್ಬಳ್ಳಿ,ಡಿ,25,2019(www.justkannada.in):  ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್  ಬರೆದಿರುವ ಪತ್ರದಲ್ಲಿ ಯಾವುದೇ ಹುರುಳಿಲ್ಲ ಎಂದು ಶಾಸಕ ಎಚ್‌.ಕೆ. ಪಾಟೀಲ್ ಹೇಳಿದರು.

ಹುಬ್ಬಳ್ಳಿಯಲ್ಲಿ ಇಂದು ಈ ಬಗ್ಗೆ ಮಾತನಾಡಿದ ಹೆಚ್.ಕೆ ಪಾಟೀಲ್, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದಲ್ಲಿ ಯಾವುದೇ ಹುರುಳಿಲ್ಲ. ಪತ್ರದ ಮೂಲಕ ಮತ್ತಷ್ಟು ಗೊಂದಲ ಸೃಷ್ಟಿಸಿದ್ದಾರೆ’. ಆದರೆ ಇದು ಬಿಜೆಪಿಯವರಲ್ಲಿ ಸಂತಸ ತಂದಿದೆ. ಜಾವಡೇಕರ್ ಪತ್ರದಲ್ಲಿ ಏನಿದೆ ಎಂದು ಬಿಜೆಪಿಯವರು ಸಂಭ್ರಮಿಸುತ್ತಿದ್ದಾರೊ ಗೊತ್ತಿಲ್ಲ. ಯೋಜನೆಗೆ ತಡೆ ನೀಡಿದ್ದ ಕೇಂದ್ರದ ವಿರುದ್ದ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಕಣ್ಣೊರೆಸಲು ತಡೆ ನೀಡಿಲ್ಲ ಎಂದು ಪತ್ರ ಬರೆದಿದ್ದಾರೆ ಎಂದು ಹರಿಹಾಯ್ದರು.

ಇದು ರಾಜ್ಯಕ್ಕೆ ಮಾಡಿದ ಮೋಸ.  ಗೋವಾ ಸರ್ಕಾರ ನೀಡಿದ ಪತ್ರ  ವಾಪಸ್ ಪಡೆದುಕೊಳ್ಳಲಿ. ಅದನ್ನ ಬಿಟ್ಟು ರಾಜ್ಯಕ್ಕೆ ಏನೆ ಮೋಸ ಮಾಡುತ್ತೀರಿ. ಯಾಕೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲವೆಂದು ಹೆಚ್.ಕೆ ಪಾಟೀಲ್ ಪ್ರಶ್ನಿಸಿದರು.

 

Key words:  Mahadai River -water – dispute Union Minister -Prakash Javadekar- letter -HK Patil