Sunday, August 23, 2026

BDA Apartments

Home Front Page ಚಾಮುಂಡಿ ಬೆಟ್ಟದ ನಂದಿಗೆ ಮಹಾಭಿಷೇಕ: ಕಣ್ತುಂಬಿಕೊಂಡ ನೂರಾರು ಭಕ್ತರು

ಚಾಮುಂಡಿ ಬೆಟ್ಟದ ನಂದಿಗೆ ಮಹಾಭಿಷೇಕ: ಕಣ್ತುಂಬಿಕೊಂಡ ನೂರಾರು ಭಕ್ತರು

ಮೈಸೂರು, ಡಿಸೆಂಬರ್ 03, 2023 (www.justkannada.in): ಚಾಮುಂಡಿ ಬೆಟ್ಟದ ನಂದಿ ವಿಗ್ರಹಕ್ಕೆ ಇಂದು ಮಹಾಭಿಷೇಕ ನಡೆಯಿತು.

ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹಾಭಿಷೇಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಲೋಕ ಕಲ್ಯಾಣಕ್ಕಾಗಿ ಪ್ರತಿವರ್ಷದಂತೆ ಈ ವರ್ಷವೂ ಮಹಾಭಿಷೇಕಾ ಕಾರ್ಯಕ್ರಮ ಆಯೋಜಿಸಲಾಗಿದೆ.

18 ನೇ ವರ್ಷದ ಮಹಾಭಿಷೇಕಾ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಸುತ್ತೂರು ದೇಶೀಕೇಂದ್ರ ಶ್ರೀಗಳು, ಹೊಸಮಠದ ಚಿದಾನಂದಾ ಶ್ರೀಗಳು ಪಾಲ್ಗೊಂಡಿದ್ದರು.

ಕ್ಷೀರಾಭಿಷೇಕ, ಗಂಧಾಭಿಷೇಕ, ಕುಂಕುಮಾಭಿಷೇಕ,ಅರಿಶಿನ ಅಭಿಷೇಕ, ಸೇರಿದಂತೆ ಸುಮಾರು 32  ಬಗೆಯ ಅಭಿಷೇಕಗಳನ್ನು ಸುತ್ತೂರು ಶ್ರೀಗಳು ನೆರವೇರಿಸಿದರು.

ಬಗೆ ಬಗೆಯ ಫಲ ಪುಷ್ಪಗಳ ಮಿಶ್ರಿತ ಅಭಿಷೇಕದಿಂದ ಬೆಟ್ಟದ ನಂದಿ ಮಿಂದೆದ್ದಿತು. ಮೂರನೇ ಕಾರ್ತಿಕ  ಸೋಮವಾರಕ್ಕೂ ಮುನ್ನ ಭಾನುವಾರ ಮಹಾಭಿಷೇಕ ಜರುಗಿತು. ಬೆಟ್ಟದ ಬಳಗ ಟ್ರಸ್ಟ್ ನ ಪ್ರಕಾಶನ್ ಕಾರ್ಯದರ್ಶಿ ಗೋವಿಂದ ಅವರ ನೇತೃತ್ವದಲ್ಲಿ ಮಹಾಭಿಷೇಕಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.