ಮೈಸೂರು,ಫೆಬ್ರವರಿ,14,2026 (www.justkannada.in): ನಾಳೆ ನಾಡಿನಾದ್ಯಂತ ಮಹಾಶಿವರಾತ್ರಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯ ತ್ರಿನೇಶ್ವರಸ್ವಾಮಿ ದೇಗುಲದಲ್ಲಿರುವ ಮೂಲ ಶಿವಲಿಂಗಕ್ಕೆ ಚಿನ್ನದ ಕೊಳಗ ಧಾರಣೆ ಮಾಡಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತದಿಂದ ಅರಮನೆಯ ತ್ರಿನೇಶ್ವರಸ್ವಾಮಿ ದೇಗುಲದ ಅರ್ಚಕರ ಸುಪರ್ದಿಗೆ ಚಿನ್ನದ ಕೊಳಗ (ಚಿನ್ನದ ಮುಖವಾಡ)ವನ್ನು ಹಸ್ತಾಂತರ ಮಾಡಲಾಗಿದೆ. ಮಹಾ ಶಿವರಾತ್ರಿಯ ದಿನ ತ್ರಿನೇಶ್ವರಸ್ವಾಮಿ ದೇಗುಲದಲ್ಲಿರುವ ಮೂಲ ಶಿವಲಿಂಗಕ್ಕೆ ಚಿನ್ನದ ಕೊಳಗ ಧಾರಣೆ ಮಾಡಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ
ಬರೋಬ್ಬರಿ ಹನ್ನೊಂದು ಕೆಜಿ ಶುದ್ದ ಚಿನ್ನದಿಂದ ಮಾಡಿರುವ ಚಿನ್ನದ ಕೊಳಗವನ್ನು ಅಂದಿನ ಅರಸ ಜಯಚಾಮರಾಜ ಒಡೆಯರ್ ಅವರು ಕೊಡುಗೆಯಾಗಿ ನೀಡಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ವೇಳೆ ಪುತ್ರ ಸಂತಾನ ಪ್ರಾಪ್ತಿಯಾದ ಕಾರಣ ತ್ರಿನೇಶ್ವರಸ್ವಾಮಿಗೆ ಹರಕೆ ರೂಪದಲ್ಲಿ ಚಿನ್ನದ ಕೊಳಗ ನೀಡಿದ್ದರು.
ಈ ಚಿನ್ನದ ಕೊಳಗ ವರ್ಷ ಪೂರ್ತಿ ಸರ್ಕಾರದ ಸುಪರ್ದಿಯಲ್ಲಿರುತ್ತದೆ. ಮಹಾಶಿವರಾತ್ರಿಯ ದಿನ ಮಾತ್ರ ತ್ರಿನೇಶ್ವರಸ್ವಾಮಿಯ ಮೂಲ ಶಿವಲಿಂಗಕ್ಕೆ ಚಿನ್ನದ ಕೊಳಗ ಧರಿಸಲಾಗುತ್ತದೆ. ವರ್ಷಕ್ಕೆ ಒಮ್ಮೆ ಮಾತ್ರ ದೇವರಿಗೆ ಧಾರಣೆ ಮಾಡುವ ಚಿನ್ನದ ಕೊಳಗವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಹಾಗಾಗಿ ಭದ್ರತಾ ಖಜಾನೆಯಲ್ಲಿ ಇರಿಸಿದ್ದ ಚಿನ್ನದ ಕೊಳಗವನ್ನು ತ್ರಿನೇಶ್ವರಸ್ವಾಮಿ ದೇಗುಲದ ಪ್ರಧಾನ ಅರ್ಚಕರಿಗೆ ಹಿರಿಯ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ. ನಾಳೆ ಬೆಳಿಗ್ಗೆ ಅರ್ಚಕರು ತ್ರಿನೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಚಿನ್ನದ ಮುಖವಾಡವನ್ನು ಧರಿಸಲಿದ್ದಾರೆ.
Key words: Maha Shivaratri, gold urn, Mysore, Trineswaraswamy temple







