‘ಮನ ಮನೆಗೆ ಮಾಚಿದೇವ’:  ಕಾರ್ಯಕ್ರಮ ಯಶಸ್ಸಿಗೆ ಸಮುದಾಯ ಮುಖಂಡರ ಪೂರ್ವಭಾವಿ ಸಭೆ.

‘Mane Manege Machideva’: Preparatory meeting of community leaders for the success of the program. A preliminary meeting was held in the city. on August 13 under the leadership of Dr. Sri Basava Machideva Swamiji, the head of the Sri Machideva Mahasamsthan Math in Chitradurga, to ensure the success of the 'Mana Manaege Machideva' program.

 

ಮೈಸೂರು, ಆ.೦೪,೨೦೨೫ : ಚಿತ್ರದುರ್ಗದ ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಶ್ರೀ ಬಸವ ಮಾಚಿದೇವ ಸ್ವಾಮೀಜಿ ನೇತೃತ್ವದಲ್ಲಿ  ಆ.೧೩ರಂದು ನಗರದಲ್ಲಿ ಹಮ್ಮಿಕೊಂಡಿರುವ ‘ಮನ ಮನೆಗೆ ಮಾಚಿದೇವ’ ಕಾರ್ಯಕ್ರಮದ ಯಶಸ್ಸಿಗೆ ಪೂರ್ವಭಾವಿ ಸಭೆ ನಡೆಯಿತು.

ಮೈಸೂರು ಜಿಲ್ಲಾ ವೀರ ಮಡಿವಾಳ ಸಂಘದ ಅಧ್ಯಕ್ಷ ಸತ್ಯನಾರಾಯಣ ಮತ್ತು ಗೌರವಾಧ್ಯಕ್ಷ ಬಿ.ಜಿ.ಕೇಶವ ಅವರ ನೇತೃತ್ವದಲ್ಲಿ ನಗರದ ಸರ್ಕಾರಿ ಅತಿಥಿಗೃಹದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮವನ್ನು  ಸಂಭ್ರಮದಿಂದ ಆಯೋಜಿಸಲು ಜಿಲ್ಲಾ ಮತ್ತು ತಾಲ್ಲೂಕು ಮಡಿವಾಳ ಸಂಘಟನೆ ಪದಾಧಿಕಾರಿಗಳು ಮತ್ತು ಸಮುದಾಯದ ಮುಖಂಡರು ತೀರ್ಮಾನಿಸಿದರು.

ಜಿಲ್ಲಾಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಆ.೧೩ರಂದು ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ನಡೆಯಲಿದೆ. ಇದೇ ಮೊದಲ ಬಾರಿಗೆ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮೈಸೂರಿನಲ್ಲಿ ಸಮುದಾಯದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್ ಸೇರಿದಂತೆ ಮೈಸೂರು ಜಿಲ್ಲೆಯ ಎಲ್ಲಾ ಶಾಸಕರು ಮತ್ತು ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಮೈಸೂರು ಜಿಲ್ಲಾ ವೀರ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಕೆಂಪಶೆಟ್ಟಿ, ಜಿಲ್ಲಾ ಖಜಾಂಚಿ ರವಿಚಂದ್ರ, ರಾಜ್ಯಾಧ್ಯಕ್ಷ ಮಂಜುಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಬೃಂದಾವನ ಮಹೇಶ್, ಹುಣಸೂರು ತಾಲ್ಲೂಕು ಅಧ್ಯಕ್ಷ ರವಿ ಚಿಲ್ಕುಂದ, ನಂಜನಗೂಡು ತಾಲ್ಲೂಕು ಅಧ್ಯಕ್ಷ ಪ್ರಸನ್ನ ಮತ್ತು ಚಂದ್ರು, ಮೈಸೂರು ತಾಲ್ಲೂಕು ಅಧ್ಯಕ್ಷ ಸಂತೋಷ ಕಿರಾಳು, ತಿ.ನರಸೀಪುರ ತಾಲ್ಲೂಕು ಅಧ್ಯಕ್ಷ ಕುರುಬೂರು ಮಹದೇವಸ್ವಾಮಿ, ಸಾಲಿಗ್ರಾಮ ತಾಲ್ಲೂಕು ಅಧ್ಯಕ್ಷ ಹರ್ಷವರ್ಧನ್, ಉಪಾಧ್ಯಕ್ಷ ಬಲರಾಮ್, ಖಜಾಂಚಿ ವೆಂಕಟೇಶ್, ಕೆ.ಆರ್.ನಗರ ತಾಲ್ಲೂಕು ಅಧ್ಯಕ್ಷ ಕುಮಾರ್, ಪಿರಿಯಾಪಟ್ಟಣ ಮಡಿವಾಳ ಸಮುದಾಯದ ಮುಖಂಡ ಕೆ.ಮಹದೇವ, ಜಿಲ್ಲಾ ಸಂಚಾಲಕ ಹನಗೂಡು ಬಸವರಾಜು, ಜಿಲ್ಲಾ ಸಮಿತಿ ನಿರ್ದೇಶಕ ಮಹೇಶ್, ಜಿಲ್ಲಾ ಸಂಚಾಲಕ ಕೆಂಬಾಲ್ ಶ್ರೀರಾಮ್, ಜಿಲ್ಲಾ ನಿರ್ದೇಶಕ ಹಾಡ್ಯ ಶ್ರೀನಿವಾಸ್, ನಂಜನಗೂಡು ತಾಲ್ಲೂಕು ಗೌರವ ಅಧ್ಯಕ್ಷ ಚಂದ್ರಶೇಖರ್, ಶಿವಣ್ಣ, ಮಡುವಿನಹಳ್ಳಿ ಮಹದೇವಣ್ಣ, ಪ್ರಧಾನ ಕಾರ್ಯದರ್ಶಿ ಬಸವರಾಜು, ಮುಖಂಡರಾದ ಶೇಖರ್, ಸಿದ್ದಲಿಂಗಪುರ ಮಹದೇವು, ಜಿಲ್ಲಾ ಮಹಿಳಾ ಅಧ್ಯಕ್ಷರಾದ ವಸಂತಕುವಾರಿ, ಎಚ್.ಡಿ.ಕೋಟೆ ತಾಲ್ಲೂಕು ಅಧ್ಯಕ್ಷ ರಂಗಸ್ವಾಮಿ, ಜಿಲ್ಲಾ ನಿರ್ದೇಶಕ ರಮೇಶ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ, ಹುಣಸೂರು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಹೊಸ ರಾಮನಹಳ್ಳಿ ರಘು, ಮಡಿವಾಳ ಮುಖಂಡ ಚಿಕ್ಕಣ್ಣ, ಮಿರ್ಲೆ ಚಂದ್ರು, ಸತೀಶ್, ಸಾಲಿಗ್ರಾಮ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ಸಭೆಯಲ್ಲಿ ಹಾಜರಿದ್ದರು.

key words: ‘Mane Manege Machideva’, Preparatory meeting, madivala community, Dr. Sri Basava Machideva Swamiji,

SUMMARY:

‘Mane Manege Machideva’: Preparatory meeting of community leaders for the success of the program.

A preliminary meeting was held in the city. on August 13 under the leadership of Dr. Sri Basava Machideva Swamiji, the head of the Sri Machideva Mahasamsthan Math in Chitradurga, to ensure the success of the ‘Mana Manaege Machideva’ program.