ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಲು ಹಣಕಾಸಿನ ಕೊರತೆ ಏನೂ ಇಲ್ಲ- ಸಚಿವ ಮಧು ಬಂಗಾರಪ್ಪ

ಬೆಳಗಾವಿ,ಡಿಸೆಂಬರ್,11,2025 (www.justkannada.in):  ರಾಜ್ಯದಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಶೂ ಸಾಕ್ಸ್  ವಿತರಣೆಗೆ ಯಾವುದೇ ಹಣಕಾಸಿನ ಕೊರತೆ ಏನೂ ಇಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿಧಾನಸಭೆ ಕಲಾಪದಲ್ಲಿ  ಶೈಕ್ಷಣಿಕ ವರ್ಷ ಮುಗಿಯಲು ಬಂದರೂ ಶಾಲಾ ಮಕ್ಕಳಿಗೆ ಶೂ ಸಾಕ್ಸ್ ಇಲ್ಲ. ಸರ್ಕಾರದಲ್ಲಿ ಹಣವಿಲ್ಲದೇ ಕೊಟ್ಟಿಲ್ವೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಪ್ರಶ್ನಿಸಿದರು.

ಇದಕ್ಕೆ  ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಇಲಾಖೆಯಲ್ಲಿ ದುಡ್ಡು ಇಲ್ಲ ಎನ್ನುವುದು ತಪ್ಪು. ಇಲಾಖೆಯಲ್ಲಿ 117 ಕೋಟಿ ರೂ. ಮಂಜೂರು ಆಗಿದೆ. ಈಗಾಗಲೇ 97ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಕೆಲವು ಕಡೆ ಎಸ್ ಡಿಎಂಸಿ ಮಾಹಿತಿ ಕೊಡುವುದು ತಡವಾಗಿದೆ.  ಅದಕ್ಕಾಗಿ ಹಣ ಅವರಿಗೆ ಹೋಗಿಲ್ಲ.  ಅವರು ಮಾಹಿತಿ ಕೊಟ್ಟ ಕೂಡಲೇ ಹಣ ಹೋಗುತ್ತದೆ.  ಶೂ ಸಾಕ್ಸ್ ಕೊಡಲು ಹಣಕಾಸಿನ ಕೊರತೆ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Key words: no shortage, funds, Minister, Madhu Bangarappa