ಶಿವಮೊಗ್ಗ,ಜೂನ್,14,2025 (www.justkannada.in): ಕ್ಯಾನ್ಸರ್ ಬಾಧಿತ ಮಕ್ಕಳ ಶಿಕ್ಷಣ ಮತ್ತು ಸಕಾಲಿಕ ಚಿಕಿತ್ಸೆಗೆ ವಿಶೇಷ ವಸತಿ ಶಾಲೆ ತೆರೆಯಲು ಚಿಂತನೆ ನಡೆಸಲಾಗಿದೆ. ಕ್ಯಾನ್ಸರ್ ರೆಸಿಡೆನ್ಸಿಯಲ್ ಸ್ಕೂಲ್ ತೆರೆಯುತ್ತೇವೆ ಎಂದು ಶಾಲಾ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಮೊದಲು ಸಂತಾಪ ಸಲ್ಲಿಸುತ್ತೇನೆ. ಅವರ ಕುಟುಂಬಸ್ಥರಿಗೆ ದೇವರು ನೋವು ಭರಿಸುವ ಶಕ್ತಿ ನೀಡಲಿ. ನಾನು ಇಲಾಖೆ ಜವಾಬ್ದಾರಿ ವಹಿಸಿಕೊಂಡು ಎರಡು ವರ್ಷ ಆಗಿದೆ. ಪಕ್ಷ ಅವಕಾಶ ಕೊಟ್ಟಾಗ ಪೋಕಸ್ ಇಟ್ಟು, ದೇವರ ಕೆಲಸದ ರೀತಿ ಮಾಡಿದ್ದೇನೆ. ಸಂವಿಧಾನ ಪೀಠಿಕೆ ಓದು, ಮರು ಪರೀಕ್ಷೆ ಘೋಷಣೆ ಮಾಡಿದ್ದಕ್ಕೆ ಸಾಕಷ್ಟು ಟೀಕೆ- ಟಿಪ್ಪಣಿ ಬಂದವು. ಅನೇಕ ಹೊಸ ಕಾರ್ಯಕ್ರಮವನ್ನ ಸಹ ಜಾರಿಗೆ ತಂದಿದ್ದೆವೆ. ಮಕ್ಕಳಿಗೆ ಅವಕಾಶಗಳ ಕೊರತೆಯಾಗಬಾರದು ಎಂದು ಹೊಸ ಪ್ರಯತ್ನ ಮಾಡಿದ್ಧೆನೆ. ಇಡೀ ದೇಶದಲ್ಲಿ ರೀ- ಎಕ್ಸಾಂ ಪಾಲಿಸಿ ಇರೋದು ನಮ್ಮಲ್ಲಿ ಮಾತ್ರ. ರಾಜ್ಯದಲ್ಲಿ ಈ ಬಾರಿ 51 ಮಕ್ಕಳು ಎಸ್ಎಸ್ಎಲ್ಸಿ ಯಲ್ಲಿ 625 ಅಂಕ ಗಳಿಸಿದ್ದಾರೆ. ಇದು ನಿಜವಾದ ಅಭಿವೃದ್ಧಿ. ನನಗೆ ಕನ್ನಡ ಬರಲ್ಲ..,ನನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡಿದೋರಿಗೆ ಇದೇ ಉತ್ತರ. ಸರ್ಕಾರಿ ಶಾಲೆಯ ಮಕ್ಕಳು ಶೇ.36 ರಷ್ಟು ಪಾಸ್ ಆಗಿದ್ದಾರೆ ಎಂದು ತಿರುಗೇಟು ನೀಡಿದರು.
ಕ್ಯಾನ್ಸರ್ ರೆಸಿಡೆನ್ಸಿಯಲ್ ಸ್ಕೂಲ್ ಅನ್ನು ತೆರೆಯಲು ಚಿಂತನೆ ನಡೆಯುತ್ತಿದೆ. ಶಿಕ್ಷಣದ ಜೊತೆಗೆ ಮಗುವಿಗೆ ಆರೋಗ್ಯ ನೀಡಲು ಯೋಚನೆ ಮಾಡಿದ್ದೇವೆ. ಕಿದ್ವಾಯಿ ಆಸ್ಪತ್ರೆಯ ಅಕ್ಕಪಕ್ಕದಲ್ಲೇ ಶಾಲೆ ಆರಂಭಿಸುವ ಚಿಂತನೆಯಿದೆ. ರಾಜ್ಯದಲ್ಲಿ ಸುಮಾರು 3500 ಮಕ್ಕಳು ದಾಖಲು ಆಗುವ ನಿರೀಕ್ಷೆಯಿದೆ. ಇದರಲ್ಲಿ ಕನಿಷ್ಟ 1500 ಮಕ್ಕಳಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ – ಶಿಕ್ಷಣ ಕೊಡುವ ಇರಾದೆಯಿದೆ. ಪ್ರಾಥಮಿಕವಾಗಿ 1ರಿಂದ 10ನೇ ತರಗತಿವರೆಗೂ ಮಾಡುತ್ತೇವೆ. ಎಲ್ಲಾ ಪ್ರಕ್ರಿಯೆ ಆದರೆ, ಜುಲೈ ವೇಳೆಗೆ ಕ್ಯಾನ್ಸರ್ ರೆಸಿಡೆನ್ಸಿಯಲ್ ಸ್ಕೂಲ್ ಆರಂಭಿಸುತ್ತೇವೆ. ಇನ್ಫೋಸಿಸ್ ಸಂಸ್ಥೆಯಿಂದ 200 ಕೋಟಿ ಸಿಎಸ್ಆರ್ ಹಣವನ್ನ ಕೊಡುತ್ತಿದ್ದಾರೆ. ಮುಖ್ಯವಾಗಿ ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ ಆ ಹಣ ಬಳಸಲಾಗುತ್ತದೆ. ಜೊತೆಗೆ ಶಿಕ್ಷಣ ಇಲಾಖೆಯಿಂದ ಸ್ಟುಡಿಯೊ ಮಾಡಲಾಗುತ್ತಿದೆ. ಯೂಟ್ಯೂಬ್ ಚಾನಲ್ ಮೂಲಕವೂ ಉತ್ತಮ ಶಿಕ್ಷಕರಿಂದ ಭೋದನೆ ಮಾಡಲಾಗುತ್ತದೆ. ರಾಜ್ಯದಲ್ಲಿ ಯಾವುದೇ ಕನ್ನಡ ಶಾಲೆಗಳನ್ನು ಬಂದ್ ಮಾಡುವುದಿಲ್ಲ. 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಯನ್ನ ಮಾಡಿಕೊಂಡಿದ್ದೇವೆ ಎಂದರು.
ಶರಾವತಿ ಸಂತ್ರಸ್ತರ ಸಮಸ್ಯೆ ಸದ್ಯದಲ್ಲೇ ಬಗೆಹರಿಯಲಿದೆ. ಶರಾವತಿ ಸಂತ್ರಸ್ತರ ಏನೇ ಸಮಸ್ಯೆ ಇದ್ದರೂ ಜಿಲ್ಲಾಧಿಕಾರಿಗಳ ಗಮನಕ್ಕೆ ತನ್ನಿ. ಶರಾವತಿ ಸಂತ್ರಸ್ತರು ಯಾರು ಗಾಬರಿಯಾಗುವುದು ಬೇಡ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
Key words: Health, education, cancer residential school, Minister, Madhu Bangarappa