ಅದಾನಿ, ಅಂಬಾನಿಗೋಸ್ಕರ ಕದನ ವಿರಾಮ ಘೋಷಣೆ: ಇದೆಲ್ಲಾ ಅಡ್ಜೆಸ್ಟ್ ಮೆಂಟ್ ರಾಜಕೀಯ-ಎಂ.ಲಕ್ಷ್ಮಣ್  

ಮೈಸೂರು,ಮೇ,16,2025 (www.justkannada.in): ಕದನ ವಿರಾಮ ಘೋಷಣೆ ವಿಚಾರಕ್ಕೆ ಸಂಬಂದಿಸಿದಂತೆ  ಪ್ರಧಾನಿ  ನರೇಂದ್ರ ಮೋದಿ ನಡೆಗೆ ಕಾಂಗ್ರೆಸ್ ವಕ್ತಾರ  ಎಂ ಲಕ್ಷ್ಮಣ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕದನ ವಿರಾಮ ಘೋಷಣೆ ಕುರಿತು ಕೇಂದ್ರ ಸರ್ಕಾರದ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್, ಪಾಕ್ ಆಕ್ರಮಿತ ಪ್ರದೇಶ  ವಶಪಡಿಸಿಕೊಳ್ಳಲು ಒಂದು ಒಳ್ಳೆಯ ಅವಕಾಶ ಇತ್ತು. ಆದರೆ ಪ್ರಧಾನ ಮೋದಿ, ಅಮೇರಿಕಾ ಅಧ್ಯಕ್ಷ ಟ್ರಂಪ್ ಮಾತು ಕೇಳಿ ಕೈಚೆಲ್ಲಿ ಕೂತರು. ಇದು ಕೇವಲ ಇಬ್ಬರಿಗೋಸ್ಕರ ಕದನ ವಿರಾಮ ಘೋಷಣೆ ಮಾಡಿರೋದು. ಅವರು ಯಾರು ಅಂದ್ರೆ ಅದಾನಿ, ಅಂಬಾನಿ.  ಇವರಿಬ್ಬರ ವ್ಯಾಪಾರಕ್ಕೆ ಹೊಡೆತ ಬೀಳುತ್ತೆ ಎನ್ನುವ ಉದ್ದೇಶಕ್ಕಾಗಿ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದರು. ಎಂತಹ ಅವಕಾಶ ಇತ್ತು ಪಾಕಿಸ್ತಾನವನ್ನ ಚಿಂದಿ ಉಡಾಯಿಸಬಹುದಿತ್ತು. ಇದನ್ನು ಕೈ ಚೆಲ್ಲಿ ಭಾರತೀಯ ಸೈನಿಕರಿಗೆ ಅಪಮಾನ ಮಾಡುವ ಕೆಲಸವನ್ನ ಪ್ರಧಾನಿ ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದೆಲ್ಲಾ ಅಡ್ಜೆಸ್ಟ್ಮೆಂಟ್ ರಾಜಕೀಯ. ಈಗ ತಾನಾಗಿಯೇ ಇಂದಿರಾ ಗಾಂಧಿ ನೆನಪಿಸಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಬಿಜೆಪಿ ಇಲ್ಲ ಅಂದರೆ ಬಿಜೆಪಿ ಇಲ್ಲ. ಹಿಂದೂ ಮುಸ್ಲಿಮ್ ಎಂದು ಕೋಮು ಭಾವನೆ ತಂದು ಪಕ್ಷ ಅಧಿಕಾರಕ್ಕೆ ಬರೋದು ಒಂದೇ ಒಂದು ಉದ್ದೇಶ. ಇದನ್ನೇಲ್ಲ ಮಾತನಾಡಿದರೆ ನಾವು ದೇಶ ದ್ರೋಹಿಗಳು. ಮೊದಲು ನಿಮ್ಮ ವಿಶ್ವಗುರುವನ್ನ ದೇಶ ದ್ರೋಹಿ ಎಂದು ಜೈಲಿಗೆ ಹಾಕಬೇಕು ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.

ಈ ಕೂಡಲೇ ವಿಜಯ್ ಶಾನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಜೈಲಿಗಟ್ಟಬೇಕು.

ಆರ್ಮಿ ಕಮಾಂಡೆಂಟ್ ಸೋಫಿಯ ಖುರೇಷಿ ಕುರಿತು ಬಿಜೆಪಿ ನಾಯಕ ವಿಜಯ್ ಶಾ ಅವಹೇಳನಕಾರಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಮಧ್ಯಪ್ರದೇಶದ ಸಚಿವ, ಬಿಜೆಪಿ ನಾಯಕ  ವಿಜಯ್ ಶಾ ಧರ್ಮಧಾರಿತವಾಗಿ ಮಾತನಾಡಿದ್ದಾರೆ. ಸೇನೆಯಲ್ಲಿ ಜಾತಿ ಧರ್ಮ ಎಂಬುದಿಲ್ಲ. ಸೋಫಿಯ ಖುರೇಶಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಖುರೇಶಿ ಟೆರರಿಸ್ಟ್ ತಂಗಿ ಎಂದು ಕರೆದಿದ್ದಾರೆ. ಇದನ್ನು ಇಲ್ಲಿಯವರೆಗೆ ಬಿಜೆಪಿಯ ಯಾವ ನಾಯಕರು ಖಂಡನೆ ಮಾಡಿಲ್ಲ. ಇದು ಬಿಜೆಪಿ ಸರ್ಕಾರದ ಹೇಳಿಕೆಯಾಗಿದೆ. ಮುಸ್ಲಿಂ ಎಂಬ ಕಾರಣಕ್ಕೆ ಬಿಜೆಪಿ ಆರ್ ಎಸ್ ಎಸ್ ಅಳತೆ ಮಾಡುತ್ತಿದೆ. ಇದೇ ಹೇಳಿಕೆ ವಿರೋಧ ಪಕ್ಷಗಳು ಮಾತನಾಡಿದ್ರೆ ಬೆಂಕಿ ಹೊತ್ತಿಸಿಬಿಡುತ್ತಿದ್ದರು. ಈ ಕೂಡಲೇ ಆತನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಜೈಲಿಗಟ್ಟಬೇಕು ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಆಗ್ರಹಿಸಿದರು.

Key words: Ceasefire, announcement,adjustment politics, M. Laxman