ಬೆಂಗಳೂರು,ನವೆಂಬರ್,18,2025 (www.justkannaa.in): ರಾಜ್ಯದಲ್ಲಿ ಔಷಧ ತಯಾರಿಕಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಕೇಂದ್ರ ಸರಕಾರವು ಒಂದು ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು (ನೈಪರ್) ಮಂಜೂರು ಮಾಡಬೇಕಾದ ಜರೂರಿದೆ. ಈ ಕೇಂದ್ರಕ್ಕೆ ಉದ್ದೇಶಿತ ಕ್ವಿನ್ ಸಿಟಿಯಲ್ಲಿ ಸ್ಥಳಾವಕಾಶ ಮಾಡಿಕೊಡಲು ಸರಕಾರ ಮುಕ್ತ ಮನಸ್ಸನ್ನು ಹೊಂದಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಚರ್ಚಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಔಷಧ ಮತ್ತು ಬಯೋಟೆಕ್ ತಯಾರಿಕಾ ಕಂಪನಿಗಳ ಮುಖ್ಯಸ್ಥರ ಜತೆಗಿನ ದುಂಡು ಮೇಜಿನ ಸಭೆಯಲ್ಲಿ ಸಚಿವ ಎಂ.ಬಿ ಪಾಟೀಲ್ ಅವರು ಮಾತನಾಡಿದರು. ಫಾರ್ಮಾ ಕಂಪನಿಗಳ ಸಲಹೆ ಮೇರೆಗೆ ಸಚಿವ ಎಂ.ಬಿ ಪಾಟೀಲ್ ಈ ವಿಷಯ ತಿಳಿಸಿದರು. ಕರ್ನಾಟಕದಲ್ಲಿ ಇರುವ ಉತ್ತಮ ಫಾರ್ಮಾ ಕಾರ್ಯಪರಿಸರದಿಂದಾಗಿ ಕೇವಲ ನೆರೆ ರಾಜ್ಯಗಳೊಂದಿಗೆ ಸ್ಪರ್ಧೆ ಅಷ್ಟೇ ಅಲ್ಲ ಚೀನಾ ಜತೆಗೂ ಮಾಡಬಹುದಾಗಿದೆ ಎಂದು ಅನೇಕ ಉದ್ಯಮಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್ ಹೂಡಿಕೆ ಮಾಡುವ ಸಂಸ್ಥೆಗಳಿಗೆ ಅಗತ್ಯ ಇರುವ ಎಲ್ಲ ರೀತಿಯ ಸಹಕಾರವನ್ನು ಸರ್ಕಾರದ ಕಡೆಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಚೆನ್ನೈ- ಬೆಂಗಳೂರು ಬಿಜಿನೆಸ್ ಕಾರಿಡಾರಿನಲ್ಲಿ ತುಮಕೂರಿನಲ್ಲಿ 360 ಎಕರೆ, ವಿಜಯಪುರದ ಮುಳವಾಡ ಹಂತ 1 ಮತ್ತು 2ರಲ್ಲಿ 850 ಎಕರೆ, ಯಾದಗಿರಿ ಜಿಲ್ಲೆಯ ಕಡಚೂರಿನಲ್ಲಿ 763 ಎಕರೆ, ಚಿತ್ರದುರ್ಗದ ಯಟಗುರ್ಕಿಯಲ್ಲಿ 764 ಎಕರೆ ಭೂಮಿ ಅಲ್ಲಿಯ ಕೈಗಾರಿಕಾ ಪ್ರದೇಶಗಳಲ್ಲಿ ಲಭ್ಯವಿದೆ. ಜೊತೆಗೆ ಫಾರ್ಮಾಸುಟಿಕಲ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿರುವ ಕೋಲಾರದ ಶ್ರೀನಿವಾಸಪುರ ಮತ್ತು ಚಾಮರಾಜನಗರದಲ್ಲಿ ತಲಾ 1,000 ಎಕರೆ ಜಾಗವಿದೆ. ಔಷಧ ತಯಾರಿಕೆ ಕಂಪನಿಗಳು ಇಲ್ಲಿ ಹೂಡಿಕೆ ಮಾಡಿ, ತಮ್ಮ ಉದ್ಯಮ ಸ್ಥಾಪಿಸುವತ್ತ ಗಮನ ಹರಿಸಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.
ಕೆಲವೆಡೆಗಳಲ್ಲಿ ವಸತಿ, ಶಾಲೆ, ಹೋಟೆಲ್, ಸಂಪರ್ಕ ರಸ್ತೆಗಳು ಇಲ್ಲದಿರುವುದನ್ನು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ. ಉದ್ಯಮಿಗಳು ಬೆಂಗಳೂರಿನಿಂದ ಹೊರಗಿನ ಸ್ಥಳಗಳಲ್ಲಿ ಹೂಡಿಕೆ ಮಾಡಿದರೆ ಆಕರ್ಷಕ ರಿಯಾಯಿತಿಗಳನ್ನು ಕೊಡಲಾಗುವುದು. ಜೊತೆಗೆ ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಸಿ.ಎ. ನಿವೇಶನಗಳಲ್ಲಿ ವಸತಿ/ಶಾಲೆ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಿ-ಕ್ಯಾಂಪ್ ಮಾದರಿಯಲ್ಲಿ ಶೈಕ್ಷಣಿಕ ಅನುಕೂಲ ಕಲ್ಪಿಸುವುದನ್ನು ಚಿಂತಿಸಲಾಗುವುದು. ಜೊತೆಗೆ ಏಕಗವಾಕ್ಷಿ ವ್ಯವಸ್ಥೆಯಡಿ ಅನುಮೋದನೆಗಳನ್ನು ತ್ವರಿತ ಗತಿಯಲ್ಲಿ ನೀಡುವಂತೆ ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ. ಮುಂದಿನ 6 ತಿಂಗಳಲ್ಲಿ ಈ ಬದಲಾವಣೆ ಕಣ್ಣಿಗೆ ಕಾಣಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಭರವಸೆ ಕೊಟ್ಟಿದ್ದಾರೆ.
ಔಷಧ ತಯಾರಿಕಾ ಕ್ಷೇತ್ರದಲ್ಲಿ ಈಗ ಕೃತಕ ಬುದ್ಧಿಮತ್ತೆ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದನ್ನು ಉದಾಸೀನ ಮಾಡಬಾರದು. ಜೊತೆಗೆ ಕೌಶಲ್ಯಾಭಿವೃದ್ಧಿ ಮತ್ತು ಸಂಶೋಧನಾ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಫಾರ್ಮಾ ವಲಯದವರು ಆರು ತಿಂಗಳಿಗೊಮ್ಮೆಯಾದರೂ ಒಂದು ಸಭೆ ನಡೆಸಿ, ಹೊಸ ಆಗುಹೋಗುಗಳಿಗೆ ತೆರೆದುಕೊಳ್ಳಬೇಕು ಎಂದು ಅವರು ನುಡಿದಿದ್ದಾರೆ.
ರಾಜ್ಯದಲ್ಲಿ ಉದ್ಯಮಗಳಿಗೆ 1 ಕಿಲೋ ಲೀಟರ್ ನೀರಿಗೆ ಕೇವಲ 50 ರೂ. ವಿಧಿಸಲಾಗುತ್ತಿದೆ. ನೆರೆಯ ರಾಜ್ಯಗಳಲ್ಲಿ ಇದನ್ನು 120 ರೂ.ಗೆ ಏರಿಸಲಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿರುವ ಕಂಪನಿಗಳು ಪ್ರತ್ಯೇಕವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಹೊಂದುವ ಬದಲು ಸಾಮೂಹಿಕವಾಗಿ ಮಾಡಿಕೊಂಡರೆ ಮಿತವ್ಯಯ ಸಾಧಿಸಬಹುದು ಎಂದು ಎಂ.ಬಿ ಪಾಟೀಲ್ ಸಲಹೆ ನೀಡಿದ್ದಾರೆ.
ದುಂಡು ಮೇಜಿನ ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ನೋವೋ ನಾರ್ಡಿಸ್ಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಶ್ರೋತ್ರೀಯ, ಭಾರತ್ ಬಯೋಟೆಕ್ ಸಿಎಫ್ಒ ಶ್ರೀನಿವಾಸ್, ಕೆಮ್ವೆಲ್ ಬಯೋಫಾರ್ಮಾದ ಸಿಇಒ ಅನಿರಾಗ್ ಬಗಾರಿಯ, ಶಿಲ್ಪಾ ಬಯಲಾಜಿಕಲ್ಸ್ ಸಿಇಒ ಶ್ರೀದೇವಿ ಕಂಬಂಪಾಟಿ, ಬಯೋಕಾನ್ ವತಿಯಿಂದ ಡಾ.ಕೆ ಅನಿಲ್ ಮುಂತಾದವರು ಉಪಸ್ಥಿತರಿದ್ದರು.
ENGLISH SUMMARY..
Round-table Meeting with Heads of Pharma Companies
Letter to Centre on Establishing a National Institute of Pharmaceutical Sciences Education and Research in KWIN City: M. B. Patil
Bengaluru: To bolster the growth of the pharmaceutical manufacturing sector in the State, the Central Government must sanction a National Institute of Pharmaceutical Sciences Education and Research (NIPER). The State Government is ready to allocate land for this institute in the proposed KWIN City. A formal letter will be sent to the Centre, and discussions will follow, said Minister for Large and Medium Industries, M. B. Patil, on Monday.
He was speaking at a round-table meeting organised at a private hotel here with the heads of pharmaceutical and biotech manufacturing companies.
The Minister shared these details based on suggestions from pharma industry leaders. Many industrialists pointed out that Karnataka’s robust pharmaceutical ecosystem enables the State to compete not only with neighbouring States but also with China. Responding to their views, the Minister assured that the Government would extend all necessary support to companies looking to invest.
He informed industry representatives that significant land parcels were available for development within the Chennai–Bengaluru Industrial Corridor—360 acres in Tumakuru, 850 acres in Mulavada (Phase I and 2), 763 acres in Kadachuru (Yadagiri district), and 764 acres in Yadgurki (Chitradurga district). In addition, 1,000 acres each in Srinivaspura (Kolara) and Chamarajanagara had been earmarked for pharmaceutical parks. He encouraged pharmaceutical companies to invest and establish units in these locations.
Industrialists have pointed out challenges such as the lack of housing, schools, hotels and proper access roads in certain areas. “The companies investing outside Bengaluru would receive attractive incentive packages. The officials have been instructed to permit residential/school facilities within CA sites in industrial areas. The Government is also exploring educational infrastructure on the lines of the C-CAMP model. Staff, have been trained to issue approvals quickly under the single-window clearance system. These improvements would be visible within the next six months,” he assured.
The Minister highlighted the growing importance of artificial intelligence in pharmaceutical manufacturing, stressing that it must be embraced. Continuous skill development and research must not be disrupted, he added. He also suggested that the pharma sector convene a meeting every six months to stay updated with new technologies and trends.
Patil pointed out that industries in Karnataka pay only ₹50 per kilolitre of water, whereas neighbouring States have raised the rate to ₹120. To reduce operational costs, he recommended that companies in industrial areas set up common effluent treatment plants instead of maintaining individual ones.
Those present at the round-table included Selvakumar, Principal Secretary, Industries Department; Gunjan Krishna, Commissioner; Vikrant Shrotriya, Managing Director, Novo Nordisk; Srinivas, CFO, Bharat Biotech; Aniraj Bagaria, CEO, Kemwell Biopharma; Sridevi Kambampati, CEO, Shilpa Biologicals; and Dr K. Anil from Biocon, among others.
Key words: National, Institute ,Pharmaceutical, Sciences, Education, Research, M. B. Patil







