ಚಂದ್ರಗ್ರಹಣ: ನಾಳೆ ಬೆಂಗಳೂರಿನ ಬಹುತೇಕ ದೇವಾಲಯಗಳು ಬಂದ್

ಬೆಂಗಳೂರು ,ಸೆಪ್ಟಂಬರ್,6,2025 (www.justkannada.in): ನಾಳೆ ರಾಹುಗ್ರಸ್ಥ ರಕ್ತ ಚಂದ್ರಗ್ರಹಣ ಸಂಭವಿಸಲಿದ್ದು, ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನ ಬಹುತೇಕ ದೇವಾಲಯಗಳು ಬಂದ್ ಆಗಲಿವೆ.

ನಾಳೆ ರಾತ್ರಿ 9:57 ರಿಂದ 1: 26ರವರೆಗೆ ಸುಮಾರು 3 ಗಂಟೆ 29 ನಿಮಿಷದವರೆಗೂ ಚಂದ್ರ ಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆಯಿಂದ ಗವಿ ಗಂಗಾಧರೇಶ್ವರ ದೇವಸ್ಥಾನ ಕ್ಲೋಸ್ ಆಗಿರಲಿದೆ. ಶಿವನಿಗೆ ಅಭಿಷೇಕ ಮಾಡಿ ಬೆಳಗ್ಗೆ 11 ಗಂಟೆಗೆ ದೇವಸ್ಥಾನ ಬಂದ್ ಮಾಡಲಾಗುತ್ತದೆ. ಸೋಮವಾರ ಮುಂಜಾನೆ ಶುದ್ದಿಕಾರ್ಯ ನಡೆಸಿ ಬಳಿಕ ದೇವಸ್ಥಾನ ಬಾಗಿಲು ತೆರೆಯಲಿದೆ.

ಬೆಂಗಳೂರಿನ ಮತ್ತೊಂದು ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನ ಸಹ ಗ್ರಹಣದ ದಿನ ಬಂದ್‌ ಮಾಡಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ದೇವಸ್ಥಾನ ಕ್ಲೋಸ್‌ ಮಾಡಲಾಗಿದ್ದು, ಮಧ್ಯಾಹ್ನ 2:30ರ ನಂತರ ಭಕ್ತರಿಗೆ ದರ್ಶನ ಮಾಡಲು ಅವಕಾಶ ಕೊಡಲಾಗುವುದಿಲ್ಲ. ಬೆಂಗಳೂರಿನ ಬನಶಂಕರಿ ದೇವಿ ದೇವಸ್ಥಾನವನ್ನ ಸಹ ಗ್ರಹಣದ ದಿನ ಕ್ಲೋಸ್‌ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Lunar eclipse, temples, Bengaluru, closed, tomorrow