ಆಗ ಸಾಕಷ್ಟು ಸಂಬಂಧಗಳು ಬೆಳೆದು ಬಿಟ್ಟಿವೆ: ಈಗ ‘ಲವ್ ಜಿಹಾದ್ ಕಾಯ್ದೆ’ ಮೂರ್ಖತನ– ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ ….

ಬೆಂಗಳೂರು,ಡಿಸೆಂಬರ್,1,2020(www.justkannada.in):  ಲವ್ ಜಿಹಾದ್ ಬಗ್ಗೆ ಕಾಯ್ದೆ ಜಾರಿಗೆ ತರಲು ಬಿಜೆಪಿ ಸರ್ಕಾರ ಚಿಂತನೆ ನಡೆಸುತ್ತಿದ್ದು ಈ ಸಂಬಂಧ ಮಾಜಿ ಸಿಎಂ ಸಿದ್ಧರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.logo-justkannada-mysore

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಮುಸ್ಲೀಂರು 600 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದಾರೆ. ಆಗ ಸಾಕಷ್ಟು ಸಂಬಂಧಗಳು ಬೆಳೆದು ಬಿಟ್ಟಿವೆ. ಈಗ ಲವ್ ಜಿಹಾದ್ ಬಗ್ಗೆ ಕಾಯ್ದೆ ತರ್ತೀನಿ ಅಂದ್ರೆ ಅದು ಮೂರ್ಖತನದ ಚಿಂತನೆ ಎಂದು ಟೀಕಿಸಿದ್ದಾರೆ.lots-relationships-grown-since-love-jihad-act-former-cm-siddaramaiah-criticized

ಲವ್ ಜಿಹಾದ್ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಹಿಂದೂ –ಮುಸ್ಲೀಂರು ಮದುವೆಯಾಗಬಾರದು ಎಂದು ಹೇಳುತ್ತಾರೆ. ಆದರೆ ಆಗ ಸಾಕಷ್ಟು ಸಂಬಂಧಗಳು ಬೆಳೆದು ಬಿಟ್ಟಿವೆ. ಹಿಂದೂ- ಮುಸ್ಲೀಂ ಕ್ರಾಸ್ ಆಗಿ ಹುಟ್ಟಿದ ಸಾಕಷ್ಟು ಜನರಿದ್ದಾರೆ. ಹೀಗಾಗಿ ಲವ್ ಜಿಹಾದ್ ಬಗ್ಗೆ ಕಾಯ್ದೆ ತರ್ತೀನಿ ಅಂದ್ರೆ ಅದು ಮೂರ್ಖತನ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದ್ದಾರೆ.

Key words: Lots -relationships – grown –since-love jihad act- Former CM- Siddaramaiah -criticized.