ಬೆಂಗಳೂರು,ಮೇ,20,2021(www.justkannada.in): ಕೊರೋನಾ 2ನೇ ಅಲೆಯಿಂದ ಲಾಕ್ ಡೌನ್ ಜಾರಿ ಮಾಡಿರುವ ಹಿನ್ನೆಲೆ ದುಡಿಯುವ ವರ್ಗಕ್ಕೆ ರಾಜ್ಯ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಆದರೆ ಈ ವೇಳೆ ಲಾರಿ ಚಾಲಕರಿಗೆ ಸಹಾಯಧನ ಘೋಷಣೆ ಮಾಡದಿರುವುದಕ್ಕೆ ಲಾರಿಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ರಾಜ್ಯ ಸರ್ಕಾರ ಲಾರಿ ಚಾಲಕರನ್ನ ಕಡೆಗಣಿಸಿದೆ. ತಿಂಗಳಿಗೆ 500 ರಿಂದ 600 ಕೋಟಿ ರೂ ತೆರಿಗೆ ಕಟ್ಟುತ್ತೇವೆ. ಆದರೂ ಸಹ ಸರ್ಕಾರ ಲಾರಿ ಚಾಲಕರಿಗೆ ಪರಿಹಾರ ಘೋಷಣೆ ಮಾಡಿಲ್ಲ. ಹೀಗಾಗಿ ಕೂಡಲೇ ಲಾರಿ ಚಾಲಕರಿಗೆ 5 ಸಾವಿರ ರೂ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
Key words: Lorry drivers- demand – compensation-lockdown






