Thursday, August 20, 2026

BDA Apartments

Home Crime ಪಿಲ್ಲರ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಲಾರಿ: ಚಾಲಕ ಸಜೀವ ದಹನ.

ಪಿಲ್ಲರ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಲಾರಿ: ಚಾಲಕ ಸಜೀವ ದಹನ.

ಮಂಡ್ಯ,ಮಾರ್ಚ್,,17,2022(www.justkannada.in): ಪಿಲ್ಲರ್ ಗೆ  ಲಾರಿ ಡಿಕ್ಕಿ ಹೊಡೆದು ಹೊತ್ತಿ ಉರಿದ  ಪರಿಣಾಮ ಲಾರಿ ಚಾಲಕ ಸಜೀವ ದಹನವಾಗಿರುವ ಘಟನೆ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.

ಮದ್ದೂರು ಪಟ್ಟಣದ ಬೆಂಗಳೂರು – ಮೈಸೂರು ಎಲ್.ಐ.ಸಿ ಕಛೇರಿ ಮುಂಭಾಗ ಈ ಘಟನೆ ನಡೆದಿದೆ. ಹಾಸನ ಮೂಲದ ಚಾಲಕ ದಿನೇಶ್ ಘಟನೆಯಲ್ಲಿ ಸಜೀವ ದಹನವಾಗಿದ್ದಾರೆ.

ಬಿಡದಿಯಿಂದ ಮೈಸೂರಿಗೆ ಜೆಲ್ಲಿ ತುಂಬಿಕೊಂಡು ತೆರಳುತ್ತಿದ್ದ ಲಾರಿ, ಎಲ್‌.ಐ.ಸಿ ಕಛೇರಿ ಬಳಿ ಬರುತ್ತಿದ್ದಂತೆ ಪಂಚರ್ ಆಗಿ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಲಾರಿಯ ಮುಂದಿನ ಭಾಗ ನಜ್ಜುಗುಜ್ಜಾಗಿದ್ದು ಈ ವೇಳೆ ಲಾರಿಯಲ್ಲೆ ಚಾಲಕ ದಿನೇಶ್ ಸಿಲುಕಿ ಸಜೀವ ದಹನವಾಗಿದ್ದಾರೆ.

ಸ್ಥಳಕ್ಕೆ  ಆಗಮಿಸಿದ ಅಗ್ನಿಶಾಮಕ ಮತ್ತು ಪೋಲೀಸ್ ಸಿಬ್ಬಂದಿಗಳು ಬೆಂಕಿ ನಂದಿಸಿ ಚಾಲಕನ ಶವ ಹೊರ ತೆಗೆದಿದ್ದಾರೆ. ಚಾಲಕನ ಶವ ಮದ್ದೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ವೇಳೆ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಲಾರಿಯನ್ನು ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Key words: lorry- Collided – pillar-death