ಮೈಸೂರಿನ ಅರಮನೆಯಲ್ಲಿ ಶ್ರೀರಾಮನ ಪೂಜೆ: ಉದ್ಘಾಟನಾ ಕಾರ್ಯಕ್ರಮ ವೀಕ್ಷಣೆ.

ಮೈಸೂರು,ಜನವರಿ,22,2024(www.justkannada.in):  ಇಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗಿದ್ದು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನ ಪ್ರಧಾನಿ ಮೋದಿ ನೆರವೇರಿಸಿದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯಲ್ಲಿ ಸಂಭ್ರಮದಿಂದ ಶ್ರೀರಾಮನ ಪೂಜೆ ಸಲ್ಲಿಸಲಾಯಿತು.

ಶ್ರೀರಾಮ, ಲಕ್ಷ್ಮಣ ಹಾಗೂ ಸೀತೆ ಮೂರ್ತಿಗೆ ಅರಮನೆಯ ರಾಜ ಪುರೋಹಿತರು ಪೂಜೆ ಸಲ್ಲಿಕೆ ಮಾಡಿದರು. ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ರಾಮತಾರಕ ಹೋಮ ನೆರವೇರಿಸಿದರು.

ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮವನ್ನ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಎಲ್ ಇಡಿ ಮೂಲಕ ವೀಕ್ಷಿಸಿದರು. ಅರಮನೆಯ ಆವರಣದಲ್ಲಿ ನಡೆಯುತ್ತಿರುವ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೀಕ್ಷಣೆ ಮಾಡಿದರು. ಅರಮನೆಯ ಎಲ್ಲಾ ದೇವಸ್ಥಾನಗಳಿಗೂ ಪೂಜೆ ನಂತರ ಅರಮನೆ ಆವರಣ ಸುತ್ತ ಮೆರವಣಿಗೆ ನಡೆಸಲಾಯಿತು.

Key words: Lord- Rama Pooja – Mysore Palace- Pramodadevi wodeyar