Saturday, September 12, 2026

BDA Apartments

Home Front Page ಪರಿಸ್ಥಿತಿ ನೋಡಿಕೊಂಡು ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್.

ಪರಿಸ್ಥಿತಿ ನೋಡಿಕೊಂಡು ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್.

ಬೆಳಗಾವಿ,ಡಿಸೆಂಬರ್,23,2022(www.justkannada.in): ಕೊರೋನಾ ಭೀತಿ ಶುರುವಾಗಿರುವ ಹಿನ್ನೆಲೆ ಪರಿಸ್ಥಿತಿ ನೋಡಿಕೊಂಡು ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಸುಧಾಕರ್, ಮಾಸ್ಕ್ ಕಡ್ಡಾಯ ಮಾಡಿಲ್ಲ. ಸಲಹೆ ನೀಡಿದ್ದೇವೆ. ಬೂಸ್ಟರ್ ಡೋಸ್  ಸ್ವಲ್ಪ ವೇಸ್ಟ್ ಆಗಿದೆ.   ಬೂಸ್ಟರ್ ಡೋಸ್ ಬಗ್ಗೆ ಜನ ಆಸಕ್ತಿ ವಹಿಸಿಲ್ಲ. ಮೊದಲ ಎರಡು ಡೋಸ್ ಗೆ ಇದ್ದ ಆಸಕ್ತಿ ಈಗ ಕಡಿಮೆಯಾಗಿದೆ. ಜನ ಕೊರೋನಾ ಹೋಗಿದೆ ಎಂಬ ಮನಸ್ಥಿತಿಯಲ್ಲಿದ್ದಾರೆ ಎಂದರು.ಪರಿಸ್ಥಿತಿ ನೋಡಿಕೊಂಡು ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ sudhakar

ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯ ಮಾಡುತ್ತೇವೆ. ಪ್ರಧಾನಿ ಮೋದಿಗೆ ಬೆಲೆಕೊಟ್ಟು ಮಾಸ್ಕ್ ಧರಿಸಿ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: Looking –situation- masks – state – Health Minister -Dr. K. Sudhakar.