ಲೋಕಸಭೆ ಭದ್ರತಾ ವೈಫಲ್ಯ ಪ್ರಕರಣ: ಮೈಸೂರು ಬಿಟ್ಟು ಎಲ್ಲೂ ತೆರಳದಂತೆ ಮನೋರಂಜನ್ ಕುಟುಂಬಸ್ಥರಿಗೆ ಸೂಚನೆ.

ಮೈಸೂರು, ಡಿಸೆಂಬರ್ 16,2023(www.justkannada.in):  ಲೋಕಸಭೆ ಕಲಾಪದ ವೇಳೆ ನುಗ್ಗಿ ಕೋಲಾಹಲ ಸೃಷ್ಠಿಸಿದ ವಿಚಾರ, ಭದ್ರತಾ ವೈಫಲ್ಯ ಪ್ರಕರಣ​ಕ್ಕೆ ಸಂಬಂಧಿಸಿದಂತೆ  ಮೈಸೂರಿನ ವಿಜಯನಗರದಲ್ಲಿರುವ ಆರೋಪಿ ಮನೋರಂಜನ್ ಕುಟುಂಬಸ್ಥರಿಗೆ ಸಂಕಷ್ಟ ಎದುರಾಗಿದ್ದು ಮೈಸೂರು ಬಿಟ್ಟು ಬೇರೆ ಎಲ್ಲೂ ತೆರಳದಂತೆ ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ವಿಜಯನಗರದಲ್ಲಿರುವ ಮನೋರಂಜನ್ ನಿವಾಸಕ್ಕೆ ಭೇಟಿ ನೀಡಿದ್ದ ಗುಪ್ತಚರ ಇಲಾಖೆ ಅಧಿಕಾರಿಗಳು   ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ಇದೀಗ ಇದೀಗ ಮೈಸೂರು ಬಿಟ್ಟು ಎಲ್ಲೂ ತೆರಳದಂತೆ ಕುಟುಂಬಸ್ಥರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ನಮ್ಮ ಸೂಚನೆ ಬರುವವರೆಗೂ ಮೈಸೂರಿನಿಂದ ಹೊರಗಡೆ ತೆರಳಬೇಡಿ. ತೀರಾ ತುರ್ತು ಇದ್ದರೆ ನಮ್ಮ ಗಮನಕ್ಕೆ ತಂದು ಅನುಮತಿ ಮೇಲೆ ತೆರಳಿ. ಮನೆಗೆ ಯಾವ ಸಂಬಂಧಿಕರಿಗೂ ಸದ್ಯಕ್ಕೆ ಬಾರದಂತೆ ಹೇಳಿ. ಪ್ರತಿ ನಿತ್ಯ ನಿಮಗೆ ಬರುವ ಕರೆಗಳ ಮಾಹಿತಿಯನ್ನು ಕಡ್ಡಾಯವಾಗಿ ನಮಗೆ ತಿಳಿಸಿ. ಎಲ್ಲಾ ಕರೆಗಳನ್ನು ತಪ್ಪದೆ ಸ್ವೀಕರಿಸಬೇಕು. ಮುಂದಿನ ಸೂಚನೆ ನೀಡುವವರೆಗೂ ಯಾವುದೇ ಪತ್ರಿಕೆ, ಹಳೆಯ ಪುಸ್ತಕ ಮಾರಾಟ ಮಾಡಬೇಡಿ ಎಂದು ಆರೋಪಿ ಮನೋರಂಜನ್ ಪೋಷಕರಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Key words: Lok Sabha -security –case- Manoranjan’s- family -not – leave- Mysore.