ತಕ್ಷಣವೇ ಲಾಕ್ಡೌನ್ ತೆರವು ಮಾಡುವುದಿಲ್ಲ ಎಂದ ಪ್ರಧಾನಿ ಮೋದಿ

ನವದೆಹಲಿ, ಏಪ್ರಿಲ್ 08, 2020 (www.justkannada.in): ಏಪ್ರಿಲ್ 14 ರಂದು ಲಾಕ್ಡೌನ್ ತೆರವು ಮಾಡುವುದಿಲ್ಲ. ತಕ್ಷಣವೇ ಲಾಕ್ಡೌನ್ ತೆರವು ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರೊಂದಿಗೆ ನಡೆಸಿದ ಸಭೆಯಲ್ಲಿ ಮೋದಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು,. ಏಪ್ರಿಲ್ 14ರಂದು ಲಾಕ್ಡೌನ್ ತೆರವು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ವಿಡಿಯೋ ಕಾನ್ಫೆರೆನ್ಸ್ ನಲ್ಲಿ ವಿರೋಧ ಪಕ್ಷದ ನಾಯಕರೊಂದಿಗೆ ಸಂವಾದ ನಡೆಸಿದ ಮೋದಿ, ತಕ್ಷಣವೇ ಲಾಕ್ಡೌನ್ ತೆರವುಗೊಳಿಸುವುದಿಲ್ಲ. ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಮುಂದುವರಿಕೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಈ ಮೂಲಕ ಏಪ್ರಿಲ್ 14 ರ ನಂತರವೂ ಲಾಕ್ ಡೌನ್ ಮುಂದುರೆಸುವ ಸುಳಿವು ನೀಡಿದ್ದಾರೆ.