ಲಾಕ್ ಡೌನ್: ಮೇ 3ರ ನಂತರ ಮುಂದೇನು?

ಮೈಸೂರು, ಏಪ್ರಿಲ್ 21, 2020 (www.justkannada.in): ಮೇ 3ರ ನಂತರವೂ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆ ಇದೆ.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಹೀಗಾಗಿ ಮೇ 3 ರ ನಂತ್ರ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮೇ 3ರ ನಂತ್ರ ಲಾಕ್ ಡೌನ್ ಮುಂದುವರಿಸುವ ನಿರ್ಧಾರ ಸರ್ಕಾರಕ್ಕಿಲ್ಲವಂತೆ. ಲಾಕ್ ಡೌನ್ ಮುಗಿದ ನಂತ್ರದ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಲಾಗುತ್ತಿದೆ.

ಮಾಹಿತಿ ಪ್ರಕಾರ, ಮೇ 3 ರ ನಂತರ ಲಾಕ್‌ಡೌನ್ ಕ್ರಮೇಣ ತೆಗೆದು ಹಾಕಲಾಗುತ್ತದೆ. ಕೆಲವು ಷರತ್ತುಗಳೊಂದಿಗೆ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗುತ್ತದೆ. ಕೆಂಪು ಮತ್ತು ಕಿತ್ತಳೆ ವಲಯಗಳನ್ನು ಹೊಂದಿರುವ ಪ್ರದೇಶಗಳಿಗೆ ಪ್ರಸ್ತುತ ಈ ವಿನಾಯಿತಿ ಸಿಗುವುದಿಲ್ಲ. ಕೊರೊನಾ ಪ್ರಕರಣ ಕಡಿಮೆಯಾದಂತೆ ವಿನಾಯಿತಿಯ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎನ್ನಲಾಗಿದೆ.

ಮೇ 3ರ ನಂತ್ರ ರೈಲು, ಬಸ್, ವಿಮಾನ ಸಂಚಾರಕ್ಕೆ ಅವಕಾಶ ನೀಡಬೇಕೆ ಎಂಬ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.