Friday, August 14, 2026

BDA Apartments

Home Front Page ಎಲ್.ಕೆ ಅಡ್ವಾಣಿ, ದಿ. ಪಿ.ವಿ ನರಸಿಂಹರಾವ್ ಸೇರಿ ಐವರಿಗೆ ‘ಭಾರತ ರತ್ನ’ ಪ್ರಶಸ್ತಿ ಪ್ರದಾನ.

ಎಲ್.ಕೆ ಅಡ್ವಾಣಿ, ದಿ. ಪಿ.ವಿ ನರಸಿಂಹರಾವ್ ಸೇರಿ ಐವರಿಗೆ ‘ಭಾರತ ರತ್ನ’ ಪ್ರಶಸ್ತಿ ಪ್ರದಾನ.

ನವದೆಹಲಿ, ಮಾರ್ಚ್,30,2024 (www.justkannada.in):  ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿ, ಮಾಜಿ ಪ್ರಧಾನಿಗಳಾದ ದಿ. ಪಿ.ವಿ ನರಸಿಂಹರಾವ್,ಚೌಧರಿ ಚರಣ್ ಸಿಂಗ್,  ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್, ಕೃಷಿ ವಿಜ್ಞಾನಿ ಡಾ.ಎಂ.ಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.  ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಪರವಾಗಿ ಪುತ್ರ ಪ್ರಭಾಕರ್ ರಾವ್ ಪ್ರಶಸ್ತಿ ಸ್ವೀಕರಿಸಿದರು.   ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರ ಪರವಾಗಿ ಒಉತ್ರ , ಜೆಡಿಯು ನಾಯಕ ರಾಮನಾಥ್ ಠಾಕೂರ್ ಪ್ರಶಸ್ತಿ ಸ್ವೀಕರಿಸಿದರು.

ಕೃಷಿ ವಿಜ್ಞಾನಿ ಡಾ.ಎಂ.ಎಸ್ ಸ್ವಾಮಿನಾಥನ್ ಪರವಾಗಿ ಪುತ್ರಿ ನಿತ್ಯಾರಾವ್ ಪ್ರಶಸ್ತಿ ಸ್ವೀಕಾರ ಮಾಢಿದರು. ಇನ್ನು ಮಾಜಿಪ್ರಧಾನಿ ಚೌಧರಿ ಚರಣ್ ಸಿಂಗ್ ಪರವಾಗಿ ಮೊಮ್ಮಗ ಜಯಂತ್ ಸಿಂಗ ಪ್ರಶಸ್ತಿ ಸ್ವೀಕರಿಸಿದರು.ನಾಲ್ವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನ ಕೇಂದ್ರ ಸರ್ಕಾರ ಘೋಷಿಸಿತ್ತು.

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಹಲವರು ಉಪಸ್ಥಿತರಿದ್ದರು.

Key words: LK Advani, Bharat Ratna, award