Friday, September 18, 2026

BDA Apartments

ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ BDA JK_Adv BDA Adv
Home Front Page ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ.

ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ.

ಮೈಸೂರು,ಜನವರಿ,21,2022(www.justkannada.in): ಮೈಸೂರಿನ ಬಿಜಿಎಸ್ ಅಪೋಲೊ ಆಸ್ಪತ್ರೆಯಿಂದ  ಚೆನ್ನೈಗೆ ಜೀವಂತ ಹೃದಯ ರವಾನೆ ಮಾಡಲಾಗಿದೆ.

24 ವರ್ಷದ ದರ್ಶನ್ ಎಂಬ ಯುವಕ ಅಂಗಾಂಗ ದಾನ ಮಾಡಿದ್ದು, ಅಪೋಲೊ ಆಸ್ಪತ್ರೆಯಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆ್ಯಂಬುಲೆನ್ಸ್ ಮೂಲಕ ಜೀವಂತ ಹೃದಯ ರವಾನಿಸಲಾಯಿತು. ಗ್ರೀನ್ ಕಾರಿಡಾರ್ ವ್ಯವಸ್ಥೆಯಲ್ಲಿ ಆಂಬುಲೆನ್ಸ್ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಚೆನ್ನೈಗೆ ಏರ್ ಲಿಫ್ಟ್ ಮಾಡುವ ಮೂಲಕ ಚೆನ್ನೈನ ಎಂ.ಜಿ.ಎಂ ಹೆಲ್ತ್ ಕೇರ್ ಗೆ ಜೀವಂತ ಹೃದಯ ರವಾನೆ ಮಾಡಲಾಗಿದೆ.ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ live

ಜ.18ರಂದು ರಸ್ತೆ ಅಪಘಾತವಾಗಿ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಪಘಾತದ ರಭಸಕ್ಕೆ ಯುವಕನ ಬ್ರೈನ್‌ ಡೆಡ್ ಆಗಿತ್ತು. ಮೆದುಳು ನಿಷ್ಕ್ರಿಯ ಹಿನ್ನಲೆ ಯುವಕನ ಕುಟುಂಬ ಅಂಗಾಂಗ ದಾನಕ್ಕೆ ಮುಂದಾದರು. ಮೂಲತಃ ಗುಂಡ್ಲುಪೇಟೆಯ ದರ್ಶನ್ ಮೈಸೂರಿನಲ್ಲಿ ವಾಸವಾಗಿದ್ದರು.

ಮೈಸೂರಿನ ಬೆಳವಾಡಿಯಲ್ಲಿ ಎಲೆಕ್ಟ್ರಿಕಲ್ ಕೆಲಸ ನಿರ್ವಹಿಸುತ್ತಿದ್ದರು.ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ದರ್ಶನ್ ಗೆ ಎರಡು ತಿಂಗಳ ಮಗು ಇತ್ತು. ಇದೀಗ ಆರು ಜನರ ಬಾಳಿಗೆ ಯುವಕ ದರ್ಶನ್ ಬೆಳಕಾಗಿದ್ದಾರೆ.

Key words:  live heart –Mysore –to- Chennai.