ಸಿಎಂ ಕಳಿಸಿರುವ ಖಾತೆಗಳ ಪಟ್ಟಿ ಬಗ್ಗೆ ಗೊತ್ತಿಲ್ಲ: ಹೆಚ್ಚುವರಿ ಖಾತೆ ಬಿಟ್ಟುಕೊಡಲು ಸಿದ್ಧ- ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ…

ಬೆಂಗಳೂರು,ಫೆ,10,2020(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯಪಾಲರಿಗೆ ಕಳಿಸುತ್ತಿರುವ ಖಾತೆ ಹಂಚಿಕೆ ಪಟ್ಟಿ ಬಗ್ಗೆ ನನಗೆ ಗೊತ್ತಿಲ್ಲ. ಹೆಚ್ಚುವರಿ ಪೌರಾಡಳಿತ ಖಾತೆ ಬಿಟ್ಟುಕೊಡಲು ನಾನು ಸಿದ್ಧ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಖಾತೆ ಹಂಚಿಕೆ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್, ಸಿಎಂ ಕಳುಹಿಸಿರುವ ಖಾತೆಗಳ ಪಟ್ಟಿ ಬಗ್ಗೆ ನನಗೆ ಗೊತ್ತಿಲ್ಲ.  ನನಗೆ ಕಂದಾಯ ಖಾತೆಯಲ್ಲಿ ತೃಪ್ತಿ ಇದೆ. ಹೆಚ್ಚವರಿ ಪೌರಾಡಳಿತ ಖಾತೆ ಬಿಟ್ಟುಕೊಡಲು ಸಿದ್ಧ ಎಂದು ಸ್ಪಷ್ಟನೆ ನೀಡಿದರು.

10 ಮಂದಿ ನೂತನ ಸಚಿವರಿಗೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಲಿದ್ದು ಈಗಾಗಲೇ ಪಟ್ಟಿ ಸಿದ್ದವಾಗಿದೆ. ಈ ಪಟ್ಟಿಯನ್ನ ರಾಜ್ಯಪಾಲರಿಗೆ ಕಳಿಸಿತ್ತೇನೆ ಎಂದು ಬಿಎಸ್ ವೈ ತಿಳಿಸಿದ್ದಾರೆ.

Key words: list –ministrial- Ready -give -Revenue Minister -R. Ashok.