ಉಸ್ತುವಾರಿ ಸಚಿವರ ಪಟ್ಟಿ ಬದಲಾವಣೆ ಸಾಧ್ಯವೇ ಇಲ್ಲ- ಅಸಮಾಧಾನಿತರಿಗೆ ಸಿಎಂ ಬೊಮ್ಮಾಯಿ ಸಂದೇಶ.

ಬೆಂಗಳೂರು,ಜನವರಿ,25,2022(www.justkannada.in): 28 ಸಚಿವರ ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ ಬೆನ್ನಲ್ಲೆ  ಸಚಿವ ಎಂಟಿಬಿ ನಾಗರಾಜ್ ಸೇರಿ ಕೆಲ ಸಚಿವರು ತಮ್ಮ ಸ್ವಂತ ಜಿಲ್ಲೆ ಸಿಗದೆ ಇರುವುದಕ್ಕೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಅಸಮಾಧಾನಿತ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ಸಂದೇಶ ರವಾನಿಸಿದ್ದಾರೆ.

ಉಸ್ತುವಾರಿ ಪಟ್ಟಿ ಬದಲಾವಣೆ ಸಾಧ್ಯವೇ ಇಲ್ಲ ಅನಿವಾರ್ಯವಾಗಿ  ಚುನಾವಣಾ ವರ್ಷ ಅನ್ನೋ ಕಾರಣಕ್ಕೆ  ಈ ಬದಲಾವಣೆ  ಮಾಡಲಾಗಿದೆ. ಈಗಿನ ಪಟ್ಟಿಯಲ್ಲಿ ಬದಲಾವಣೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಬಗ್ಗೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಎಲ್ಲರ ಜತೆ ಸುದೀರ್ಘವಾಗಿ ಚರ್ಚಿಸಿದ್ದೇವೆ. ಯಾರೂ ಸಹ ಅಸಮಾಧಾನ ವ್ಯಕ್ತಪಡಿಸಿಲ್ಲ. ಇನ್ನು ಯಾರೂ ಸಹ ಬಿಜೆಪಿ ಬಿಟ್ಟು ಹೋಗಲ್ಲ. ಕೆಲವೇ ದಿನಗಳಲ್ಲಿ ಕಾದು ನೋಡಿ ಬಿಜೆಪಿ ಶಕ್ತಿ ಏನು ಅಂತಾ ಗೊತ್ತಾಗುತ್ತದೆ ಎಂದು ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.

Key words: list – minister- in charge- CM bommai

ENGLISH SUMMARY…

No change in District In-charge Ministers list: CM Bommai sends message to disgruntled party leaders
Bengaluru, January 25, 2022 (www.justkannada.in): Chief Minister issued orders reshuffling the District In-charge portfolios of 28 ministers recently. Disgruntled over not getting their home districts a few ministers, including MTB Nagaraj have expressed their displeasure. However, Chief Minister Basavaraj Bommai has passed on a tough message to the disgruntled leaders.
“It is impossible to change the District In-charge portfolios. The change is made, as it is inevitable as this the election year,” he has mentioned.
Speaking about this, the Chief Minister informed that nobody has expressed displeasure about the District In-charge portfolios. We have discussed in detail with everyone, no one is disgruntled. Nobody has left the party. Please wait for a few more days and you will come to know what is the strength of BJP,” he sarcastically taunted opposition leader Siddaramaiah.
Keywords: Chief Minister/ Basavaraj Bommai/ disgruntled leaders/ District In-charge portfolio/ no change