ವಿಜಯಲಕ್ಷ್ಮಿಸಹೋದರಿ ಚಿಕಿತ್ಸೆಗೆ ನೆರವಾದ ಲೀಲಾವತಿ-ವಿನೋದ್ ರಾಜ್

ಬೆಂಗಳೂರು, ಜೂನ್ 04, 2021 (www.justkannada.in): ಲೀಲಾವತಿ ಹಾಗೂ ವಿನೋದ್ ರಾಜ್ ಕುಟುಂಬ ನಟಿ ವಿಜಯ ಲಕ್ಷ್ಮಿ ಅವರಿಗೆ ಸಹಾಯ ಮಾಡಿದೆ.

ವಿಜಯಲಕ್ಷ್ಮಿ ಅವರ ಸಹೋದರಿ ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಯ ಸ್ಥಿತಿ ಬಹಳ ಗಂಭೀರವಾಗಿತ್ತು. ಈ ಕುರಿತು ದಯವಿಟ್ಟು ಸಹಾಯ ಮಾಡಿ ಎಂದು ವಿಜಯಲಕ್ಷ್ಮಿ ಮನವಿ ಮಾಡಿದ್ದರು.

ವಿಜಯಲಕ್ಷ್ಮಿಯ ಕಷ್ಟಕ್ಕೆ ಸ್ಪಂದಿಸಿದ ಹಿರಿಯ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ನೆರವು ನೀಡಿದ್ದಾರೆ.

ಉಷಾದೇವಿ ಬಹಳ ದಿನಗಳ ನಂತರ ಮಾತನಾಡಿದ್ದಾರೆ. ನಿಮ್ಮೆಲ್ಲರ ಶುಭಾಶಯ ನಮಗೆ ಧೈರ್ಯ ತಂದಿದೆ. ಲೀಲಾವತಿ ಹಾಗೂ ವಿನೋದ್ ರಾಜ್ ಅವರಿಗೆ ವಿಜಯಲಕ್ಷ್ಮಿ ಧನ್ಯವಾದ ಹೇಳಿದ್ದಾರೆ.