11ಇ ಸ್ಕೆಚ್ ವಿತರಿಸುವಲ್ಲಿ ಅಕ್ರಮ: ಲೈಸೆನ್ಸ್ ಸರ್ವೇಯರ್ ಸಸ್ಪೆಂಡ್.

ಮೈಸೂರು,ಜುಲೈ,31,2025 (www.justkannada.in):  ರಸ್ತೆ ಮತ್ತು ಮನೆಗಳಿರುವ ಜಾಗಕ್ಕೆ 11ಇ ಸ್ಕೆಚ್ ವಿತರಿಸಿ ಅಕ್ರಮವೆಸಗಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಲೈಸೆನ್ಸ್ ಸರ್ವೆಯರ್ ರೊಬ್ಬರನ್ನು ಅಮಾನತು ಮಾಡಲಾಗಿದೆ.

ಲೈಸೆನ್ಸ್ ಸರ್ವೆಯರ್ ಎ.ಟಿ.ನಾಗರಾಜ್  ಅವರನ್ನ ಅಮಾನತು ಮಾಡಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರಾದ ರಮ್ಯಾ ಆದೇಶ ಹೊರಡಿಸಿದ್ದಾರೆ. 11ಇ ಸ್ಕೆಚ್ ವಿತರಿಸುವ ವೇಳೆ ಲೈಸೆನ್ಸ್ ಸರ್ವೆಯರ್ ಎಟಿ ನಾಗರಾಜ್ ಅಕ್ರಮ ಎಸಗಿರುವ ಬಗ್ಗೆ ಚಾಮುಂಡೇಶ್ವರಿ ರೆವಿನ್ಯೂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ದೂರು ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು.

ದಾಖಲೆಗಳನ್ನ ಪರಿಶೀಲಿಸಿದಾಗ 11ಇ ಸ್ಕೆಚ್ ವಿತರಿಸುವ ವೇಳೆ ಲೈಸೆನ್ಸ್ ಸರ್ವೆಯರ್ ಎಟಿ ನಾಗರಾಜ್ ಅಕ್ರಮ ಎಸಗಿರುವುದು ಖಚಿತವಾದ್ದು ಈ ಹಿನ್ನಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ದೂರಿನ ಅನ್ವಯದಂತೆ ಭೂದಾಖಲೆಗಳ ಸಹಾಯಕ ನಿರ್ದೇಶಕ  ಮಂಜುನಾಥ್ ರವರು ದಾಖಲೆಗಳನ್ನ ಪರಿಶೀಲಿಸಿದಾಗ ಸಾರ್ವಜನಿಕರು ಓಡಾಡುವ ರಸ್ತೆ ಹಾಗೂ ಮನೆಗಳಿರುವ ಜಾಗ 5 1/4 ಗುಂಟೆ ಪ್ರದೇಶಕ್ಕೆ ಅಕ್ರಮವಾಗಿ 11ಇ ಸ್ಕೆಚ್ ವಿತರಿಸಿರುವುದು ಕಂಡುಬಂದಿತ್ತು. ಮಂಜುನಾಥ್  ಅವರು ನೀಡಿದ ವರದಿ ಅನ್ವಯದಂತೆ ಅಕ್ರಮ ಎಸಗಿದ ಲೈಸೆನ್ಸ್ ಸರ್ವೆಯರ್ ಎ.ಟಿ.ನಾಗರಾಜ್ ರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.vtu

Key words: 11E Sketch, illegal, distributing, License Surveyor, Suspend