ಭಾರತಕ್ಕೆ ಚಿರತೆಗಳು ಬಂದಿವೆ, ಆದರೆ 16 ಕೋಟಿ ಉದ್ಯೋಗ ಬರುವುದು ಯಾವಾಗ? ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ

ಬೆಂಗಳೂರು, ಸೆಪ್ಟೆಂಬರ್ 18, 2022 (www.justkannada.in): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮುಂದುವರಿಸಿದ್ದಾರೆ.

ಭಾರತಕ್ಕೆ ಎಂಟು ಚಿರತೆಗಳು ಬಂದಿವೆ. ಆದ್ರೆ, ಎಂಟು ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳನ್ನು ಏಕೆ ಸೃಷ್ಟಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್‌ ಗಾಂಧಿ, ʻಭಾರತಕ್ಕೆ ಎಂಟು ಚಿರತೆಗಳು ಬಂದಿವೆ. ಈಗ ಹೇಳಿ ಎಂಟು ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳು ಏಕೆ ಬರಲಿಲ್ಲʼ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿಯವರ ಜನ್ಮದಿನವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಆಚರಿಸುತ್ತಿದ್ದಾರೆ. ಪ್ರಧಾನಿ ಅವರು ಭರವಸೆ ನೀಡಿದಂತೆ ಅವರಿಗೆ ಉದ್ಯೋಗವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.