Monday, September 28, 2026

BDA Apartments

ಕಬ್ಬಿನ ಗದ್ದೆಗೆ ತೆರಳುತ್ತಿದ್ದ ವೇಳೆ ಚಿರತೆ ದಾಳಿ: ಹೋರಾಡಿ ಪ್ರಾಣ ಉಳಿಸಿಕೊ...
Home Crime ಕಬ್ಬಿನ ಗದ್ದೆಗೆ ತೆರಳುತ್ತಿದ್ದ ವೇಳೆ ಚಿರತೆ ದಾಳಿ: ಹೋರಾಡಿ ಪ್ರಾಣ ಉಳಿಸಿಕೊಂಡ ರೈತ.

ಕಬ್ಬಿನ ಗದ್ದೆಗೆ ತೆರಳುತ್ತಿದ್ದ ವೇಳೆ ಚಿರತೆ ದಾಳಿ: ಹೋರಾಡಿ ಪ್ರಾಣ ಉಳಿಸಿಕೊಂಡ ರೈತ.

ಮಂಡ್ಯ,ಮೇ,30,2022(www.justkannada.in):  ಬೈಕ್ ನಲ್ಲಿ ಕಬ್ಬಿನ ಗದ್ಧೆಗೆ ತೆರಳುತ್ತಿದ್ದ ವೇಳೆ ರೈತನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಯ ಹೆಚ್. ಹೊಸೂರು ಗ್ರಾಮದಲ್ಲಿ ನಡೆದಿದೆ.

ಬೈಕ್ ನಲ್ಲಿ ಗಬ್ಬಿನ ಗದ್ಧೆಗೆ ತೆರಳುತ್ತಿದ್ದ ವೇಳೆ ಚಿರತೆ ಏಕಾಏಕಿ ದಾಳಿ ನಡೆಸಿದ್ದು ಈ ವೇಳೆ ರೈತ ಚಿರತೆಯೊಂದಿಗೆ 15 ನಿಮಿಷ ಹೋರಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ರೈತ ಜಗದೀಶ್ ಅವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕಬ್ಬಿನ ಗದ್ದೆಗೆ ತೆರಳುತ್ತಿದ್ದ ವೇಳೆ ಚಿರತೆ ದಾಳಿ leapard

ಹೊಸಹಳ್ಳಿ, ಕೆಂಬೂತನಗೆರೆಯಲ್ಲಿ  ಕಳೆದ ಮೂರು ದಿನಗಳಿಂದ ಚಿರತೆ ದಾಳಿ ಮಾಡುತ್ತಿದ್ದು, ಎರಡು ಮೇಕೆಗಳನ್ನು ಚಿರತೆ ಹೊತ್ತೊಯ್ದಿದೆ. ಆದರೆ ಈ ಬಗ್ಗೆ  ವಿಷಯ ತಿಳಿಸಿದರೂ  ಸಹ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದು,  ಬೋನ್ ಇರಿಸಿ ಚಿರತೆ ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.

Key words: leopard-attacks-farmer-mandya