ವಿಧಾನಪರಿಷತ್ ನಲ್ಲೂ ಧನವಿನಿಯೋಗ ವಿಧೇಯಕ ಅಂಗೀಕಾರ…

ಬೆಂಗಳೂರು,ಜು,29,2019(www.justkannada.in): ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ  ಧನವಿನಿಯೋಗ ವಿಧೇಯಕ 2019 ಇದೀಗ ವಿಧಾನಪರಿಷತ್ ನಲ್ಲೂ ಅಂಗೀಕಾರವಾಗಿದೆ.

ವಿಧಾನಪರಿಷತ್‍ನಲ್ಲಿ ಇಂದು ಧ್ವನಿ ಮತದ ಮೂಲಕ  ಧನವಿನಿಯೋಗ ವಿಧೇಯಕ ಅಂಗೀಕರಿಸಲಾಯಿತು. ವಿಧಾನ ಪರಿಷತ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಧನವಿನಿಯೋಗ ವಿಧೇಯಕ  ಮಂಡಿಸಿ ಸದನದಲ್ಲಿ ಅಂಗೀಕರಿಸಬೇಕೆಂದು ಸದಸ್ಯರೆಲ್ಲರಿಗೂ ಮನವಿ ಮಾಡಿಕೊಂಡರು.

ಬೆಳಿಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಶ್ವಾಸಮತಯಾಚನೆ ಸಾಭೀತು ಪಡಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಧನವಿನಿಯೋಗ ವಿಧೇಯಕ ಮಂಡಿಸಿದ್ದರು.  ವಿಧೇಯಕ ಅಂಗೀಕರಿಸಲ್ಪಟ್ಟಿತ್ತು.  ಈ ಮೂಲಕ ಎರಡು ಸದನದಲ್ಲೂ ವಿಧೇಯಕ ಪಾಸ್ ಆಗಿದ್ದು , ಸರ್ಕಾರಿ ನೌಕರರ ಸಂಭಳಕ್ಕೆ ಭಯವಿಲ್ಲ. ಡೋಂಟ್ ವೆರಿ ಎನ್ನುವಂತಾಗಿದೆ.

Key words: legislative council- Financial bill -pass