ಪರಿಷತ್ ಚುನಾವಣೆ: ತಲಾ ಒಂದೊಂದು ಗೆಲುವಿನ ಖಾತೆ ತೆರೆದ ಮೂರು ಪಕ್ಷಗಳು.

ಬೀದರ್,ಡಿಸೆಂಬರ್,14,2021(www.justkannada.in):  ವಿಧಾನಪರಿಷತ್ ಚುನಾವಣಾ ಫಲಿತಾಂಶ  ಹೊರಬೀಳುತ್ತಿದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಲಾ ಒಂದೊಂದು ಗೆಲುವಿನ ಖಾತೆ ತೆರೆದಿವೆ.

ಬೀದರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂಬಿರಾವ್ ಪಾಟೀಲ್ 221 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.  ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದರೇ ಹಾಸನದಲ್ಲಿ ಜೆಡಿಎಸ್ ಗೆದ್ದಿದೆ. ಈ ಮೂಲಕ ಮೂರು ಪಕ್ಷಗಳು ಪರಿಷತ್ ಚುನಾವಣೆಯಲ್ಲಿ ಖಾತೆ ತೆರೆದಿವೆ.

ಬೀದರ್ ನಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ವಿರುದ್ಧ 221 ಮತಗಳ ಅಂತರದಿಂದ ಅಂಬಿರಾವ್ ಪಾಟೀಲ್ ಗೆದ್ಧು ಬೀಗಿದ್ದಾರೆ. ಅಂಬಿರಾವ್ ಪಾಟೀಲ್ ಗೆ 1776 ಮತಗಳು. ಪ್ರಕಾಶ್ ಖಂಡ್ರೆಗೆ 1555 ಮತಗಳು ಚಲಾವಣೆಯಾಗಿದೆ.

ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರನ್ನು ಸೋಲಿಸೋ ಮೂಲಕ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ 105 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಕೊಡಗಿನಲ್ಲಿ ವಿಜೋಯೋತ್ಸವ ಆಚರಿಸುವಂತೆ ಆಗಿದೆ.

ಅಂದಹಾಗೇ ಪರಿಷತ್ ಚುನಾವಣೆಯಲ್ಲಿ 1,229 ಮತಗಳು ಜಿಲ್ಲೆಯಲ್ಲಿ ಚಲಾವಣೆಗೊಂಡಿದ್ದವು. ಬಿಜೆಪಿಯ ಸುಜಾ ಕುಶಾಲಪ್ಪ 705 ಮತಗಳನ್ನು ಪಡೆದಿದ್ದರೇ, ಕಾಂಗ್ರೆಸ್ ನ‌ ಮಂಥರ್ ಗೌಡ ಅವರು 603 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡಗಿಂತ 105 ಮತಗಳನ್ನು ಹೆಚ್ಚು ಪಡೆದಂತ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ.

Key words: legislative Council –elections-three parties –open- each winning