Thursday, August 13, 2026

BDA Apartments

Home Front Page ಪರಿಷತ್ ಚುನಾವಣೆ:  ಜೆಡಿಎಸ್ ಬೆಂಬಲಕ್ಕೆ ಮನವಿ ಮಾಡುತ್ತೇವೆ- ಮಾಜಿ ಸಿಎಂ ಬಿಎಸ್ ವೈ.

ಪರಿಷತ್ ಚುನಾವಣೆ:  ಜೆಡಿಎಸ್ ಬೆಂಬಲಕ್ಕೆ ಮನವಿ ಮಾಡುತ್ತೇವೆ- ಮಾಜಿ ಸಿಎಂ ಬಿಎಸ್ ವೈ.

ಶಿವಮೊಗ್ಗ,ನವೆಂಬರ್,25,2021(www.justkannada.in):  ಡಿಸೆಂಬರ್ 10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಬಲಿಸುವಂತೆ ಜೆಡಿಎಸ್ ಬಳಿ ಮನವಿ ಮಾಡುವುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿಧಾನಪರಿಷತ್ ನ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ 20 ಸ್ಥಾನಗಳಿಗೆ ಸ್ಪರ್ಧಿಸಿದ್ದು ಜೆಡಿಎಸ್ 7 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಹೀಗಾಗಿ ಜೆಡಿಎಸ್ ಸ್ಪರ್ಧಿಸದ ಕಡೆ ಬೆಂಬಲಿಸುವಂತೆ ಮನವಿ ಮಾಡುತ್ತೇವೆ ಎಂದರು.

ಬಿಜೆಪಿ 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಡಿಎಸ್ ಅರುಣ್ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದರು.

Key words: legislative Council- elections-appeal – JDS- support – former CM-BS Yeddyurappa