ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಉಪನ್ಯಾಸಕನ ಬಂಧನ

ಕಲಬುರ್ಗಿ,ಜನವರಿ,6,2026 (www.justkannada.in):  ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ  ಆರೋಪದ ಮೇಲೆ ಉಪನ್ಯಾಸಕನೋರ್ವನನ್ನು ಬಂಧಿಸಲಾಗಿದೆ.

ರಾಜಕುಮಾರ್ ಬಂಧಿತ ಉಪನ್ಯಾಸಕ. ಕಲಬುರ್ಗಿ ಜಿಲ್ಲೆಯ ಅಫಜಲಪುರ ಪಟ್ಟಣದ ಸರಕಾರಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕನಾಗಿದ್ದು ಉಪನ್ಯಾಸಕ ರಾಜಕುಮಾರ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.

ಹೊಸ ವರ್ಷಕ್ಕೆ ವಿದ್ಯಾರ್ಥಿನಿಗೆ ಗಿಫ್ಟ್ ಕೊಡುವ ನೆನಪದಲ್ಲಿ ಹೊಸ ವರ್ಷದ ದಿನದಂದು ಕಾಲೇಜಿಗೆ ಬೇಗ ಬರುವಂತೆ ಹೇಳಿ ಕರೆಸಿಕೊಂಡು ರಾಜಕುಮಾರ ವಿದ್ಯಾರ್ಥಿನಿಗೆ ಲೈಂಗಿಕ ಕಿರಿಕುಳ ನೀಡಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Lecturer, arrested, sexually harassing, student