ಇಂದಿನಿಂದ ಕಲಿಕಾ ಖಾತ್ರಿ ಪರೀಕ್ಷೆ ಪ್ರಾರಂಭ..

ಮೈಸೂರು,ಆಗಸ್ಟ್,29,2025 (www.justkannada.in): ಇಂದಿನಿಂದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 5, 7,8 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ  ಕಲಿಕಾ ಖಾತ್ರಿ ಪರೀಕ್ಷೆ ಪ್ರಾರಂಭವಾಗಿದೆ.

ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕಿನಲ್ಲಿ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸಲು ಕಳೆದ ಎರಡು ತಿಂಗಳಿಂದ ಇಲಾಖೆ ನೀಡಿರುವ ಮಾರ್ಗಸೂಚನೆ ಅನ್ವಯ ಎಲ್ಲಾ ಶಿಕ್ಷಕರು ನಿಗದಿತ ಪಾಠ ಬೋಧನೆಗಳನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಿ ದ್ದಾರೆ.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ 142,  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ 15,  ಒಟ್ಟು 293 ಪ್ರಾಥಮಿಕ ಶಾಲೆಗಳಿಗೆ ಹಾಗೂ 37 ಸರ್ಕಾರಿ ಪ್ರೌಢಶಾಲೆ ಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ..

5 ನೇ ತರಗತಿ ಒಟ್ಟು ವಿದ್ಯಾರ್ಥಿಗಳು, 2395,

7 ನೇ ತರಗತಿ ಒಟ್ಟು ವಿದ್ಯಾರ್ಥಿಗಳು 2156,

8 ನೇ ವಿದ್ಯಾರ್ಥಿಗಳ ಸಂಖ್ಯೆ  2092,

10 ನೇ ತರಗತಿಗಳ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 2317  ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 8960 ಇದ್ದು  ಕಲಿಕಾ ಖಾತ್ರಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ . ಈ ಪರೀಕ್ಷೆಗೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಷಯ ಬೋಧಿಸುವ ಯಾವುದೇ ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ಬಳಸಿಕೊಂಡಿಲ್ಲ ಹಾಗೂ ಮೌಲ್ಯಮಾಪನಕ್ಕೂ ಸಹ ಬಳಸಿಕೊಂಡಿರುವುದಿಲ್ಲ ಎಸ್ ಎಸ್ ಎಲ್ ಸಿ ಪರೀಕ್ಷಾ ಮಾದರಿಯಲ್ಲೇ ಈ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಏಕಕಾಲಿಕವಾಗಿ ಏಕ ಸಮಯದಲ್ಲಿ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ  ಈ ಮೂಲಕ ಮಕ್ಕಳ ಶೈಕ್ಷಣಿಕ ಗುಣಮಟ್ಟ ಮತ್ತು ಪ್ರಗತಿಯನ್ನು ಉತ್ತಮೀಕರಿಸಲು ಕಾರ್ಯವಹಿಸಲಾಗುತ್ತಿದೆ. ಒಟ್ಟಾರೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಉತ್ತಮಪಡಿಸಲು ವರ್ಷದ ಪ್ರಾರಂಭದಿಂದಲೇ ಎಲ್ಲಾ ರೀತಿಯಾದಂತಹ ಕಾರ್ಯ ಚಟುವಟಿಕೆಗಳನ್ನು ಮಾಡಲಾಗುತ್ತಿದೆ ಎಂದು ಹೆಚ್.ಡಿ ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್ ರಾಜು ತಿಳಿಸಿದ್ದಾರೆ.

Key words: Mysore, HD Kote, Learning Assurance Exam, begins, today