ಶಾಸಕ ಜಮೀರ್ ಅಹಮದ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ: ಪ್ರತಾಪ್ ಸಿಂಹ

ಮೈಸೂರು, ಏಪ್ರಿಲ್ 21, 2020 (www.justkannada.in): ಶಾಸಕ ಜಮೀರ್ ಅಹಮದ್  ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ಪಾದರಾಯನಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಜಮೀರ್ ಅಹಮದ್ ನೇರ ಕಾರಣರಾಗಿದ್ದಾರೆ. ಕೂಡಲೇ ಅವರನ್ನು  ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿಯ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಈ ಪ್ರಕರಣದಲ್ಲಿ ಬಿಬಿಎಂಪಿ ಮತ್ತು ಪೊಲೀಸ್ ಸಿಬ್ಬಂದಿಯ ನಡೆಯೇ ತಪ್ಪು ಎಂಬಂತೆ ಮಾತನಾಡಿರುವ ಶಾಸಕರ ಜಮೀರ್ ಅಹಮದ್ ಖಾನ್ ಅವರ ವಿರುದ್ಧ ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ಅಡಿಯಲ್ಲಿ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಜಮೀರ್ ಅಹಮದ್ ಖಾನ್​ಗೆ ಸಿಎಎ, ಎನ್​ಆರ್​ಸಿ ಕಾಯ್ದೆ ಬಗ್ಗೆ ಗೊತ್ತಾಗುತ್ತದೆ, ಇಸ್ರೇಲ್- ಪ್ಯಾಲೆಸ್ತೇನ್ ಗೊಂದಲವೂ ಅರ್ಥ ಆಗುತ್ತದೆ. ಆದರೆ, ಕೊರೋನಾ ಪರೀಕ್ಷೆಗೆ ಬಂದವರನ್ನು ಹೊಡೆದಿದ್ದು ಸರಿಯಲ್ಲ ಎಂಬುದು ಅರ್ಥವಾಗುವುದಿಲ್ಲವಾ ಎಂದು ಪ್ರಶ್ನಿಸಿದರು.